ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯಿತು ಬೆಂಗಳೂರು!! ನಿನ್ನೆಯ ದಿನ ಸಾವಿನ ದವಡೆಯಿಂದ ಪಾರಾಯಿತು ಹಲವು ಜೀವ!!

Share the Article

ಇತ್ತೀಚೆಗೆ ಬೆಂಗಳೂರಿನ ದೇವರಚಿಕ್ಕಹಳ್ಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದ ಅಗ್ನಿ ಅವಘಡದಲ್ಲಿ ತಾಯಿ ಮಗು ಮೃತಪಟ್ಟ ಘಟನೆ ಮಾಸುವ ಮುನ್ನವೇ ಅಂತದ್ದೇ ಒಂದು ಘಟನೆ ಬೆಂಗಳೂರಿನಲ್ಲೇ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಘಟನೆಯಲ್ಲಿ ಸಂಕಷ್ಟದಲ್ಲಿದ್ದ ಎಲ್ಲರನ್ನೂ ಬದುಕಿಸಿದ ಅಪ್ಪು ಹೆಸರಿನ ಅದೊಬ್ಬ ಹೀರೊ ಮಾತ್ರ ಜನರನ್ನು ಬದುಕಿಸಿದೆನಲ್ಲಾ ಎಂಬ ಖುಷಿಯ ಜೊತೆಗೆ ರಿಯಲ್ ಹೀರೋ ಆಗಿ ಅತ್ತಿಂದಿತ್ತ ಓಡಾಡುತ್ತಿದ್ದಾನೆ.

ಘಟನೆ ವಿವರ:ನಿನ್ನೆ ಸಂಪಿಗೆ ನಗರದ ವಿ ಮ್ಯಾಕ್ಸ್ ಚಾನೆಟ್ ಅಪಾರ್ಟ್ಮೆಂಟ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು,ಅಪಾರ್ಟ್ಮೆಂಟ್ ನ ಒಂದು ಬದಿಯಲ್ಲಿ ಹೊಗೆ ಕಾಣಿಸಿಕೊಂಡಿದ್ದನ್ನು ಗಮನಿಸಿದ ಅಲ್ಲಿನ ನಿವಾಸಿ ಮಹಿಳೆಯೋರ್ವರು ಜೋರಾಗಿ ಕಿರುಚಿದ್ದು,ಮಹಿಳೆಯ ಕಿರುಚಾಟ ಕೇಳಿಸಿ ಹೊರಬಂದ ನಿವಾಸಿಗಳು ದಟ್ಟ ಹೊಗೆಯನ್ನು ಕಂಡು ಜೀವ ಉಳಿಸಿಕೊಳ್ಳಲು ಆಚೆ ಓಡಿಬಂದಿದ್ದಾರೆ.

ಜೀವ ಉಳಿಸಿದ ಅಪ್ಪು-ಶ್ವಾನದ ಕಾರ್ಯಕ್ಕೆ ಕೃತಜ್ಞರಾದ ಜನತೆ:

ಅಪಾರ್ಟ್ಮೆಂಟ್ ನಲ್ಲಿ ನಡೆದ ಅವಘಡ ಕಂಡು ಕೆಲವರು ಮಾತ್ರ ಆಚೆ ಬಂದಾಗ, ಅದೇ ಅಪಾರ್ಟ್ಮೆಂಟ್ ನಲ್ಲಿರುವ ಅಪ್ಪು ಎಂಬ ಹೆಸರಿನ ಶ್ವಾನ ಜೋರಾಗಿ ಬೊಗಳುತ್ತಾ ಅತ್ತಿದಿಂತ್ತಾ ಓಡಾಡಿದ್ದು, ಶ್ವಾನ ಬೊಗಳುವುದನ್ನು ಕಂಡು ಹೆಚ್ಚಿನ ಜನ ಹೊರಗಡೆ ಬಂದಾಗ ದಟ್ಟ ಹೊಗೆ ಕಂಡು ಗಾಬರಿಯಿಂದ ಆಚೆ ಓಡಿದ್ದಾರೆ. ಶ್ವಾನದ ಸಮಯಪ್ರಜ್ಞೆಯಿಂದ ಹಲವು ಜೀವಗಳು ಬದುಕುಳಿದಿದ್ದು, ಶ್ವಾನದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Leave A Reply