Uppinangady: ಕಣ್ತಪ್ಪಿನಿಂದ ಬೇರೆ ಖಾತೆಗೆ ವರ್ಗಾವಣೆಯಾದ ಹಣ ಕೊಡಲು ನಿರಾಕರಣೆ – ಉಜಿರೆಯ ಉದ್ಯಮಿ ವಿರುದ್ಧ ದೂರು ದಾಖಲು

Uppinangady : ಆಸ್ಪತ್ರೆಯ ಬಿಲ್ ಪಾವತಿ ವೇಳೆ ಫೋನ್ ಪೇ ಮುಖಾಂತರ ಕಣ್ತಪ್ಪಿನಿಂದಾಗಿ ಬೇರೊಂದು ಖಾತೆಗೆ ವರ್ಗಾವಣೆ ಆದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ ಕಾರಣ ಉಜಿರೆಯ ಉದ್ಯಮಿ ವಿರುದ್ಧ ದೂರು ದಾಖಲಾಗಿದೆ.

ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಅವರಿಗೆ ಕಳುಹಿಸಬೇಕಾದ 19,000 ರೂ. ಮೊತ್ತ ಕಣ್ತಪ್ಪಿನಿಂದಾಗಿ ಉಜಿರೆಯಲ್ಲಿ ಬಟ್ಟೆ ಅಂಗಡಿ ಹಾಗೂ ತರಕಾರಿ ಅಂಗಡಿಯನ್ನು ಹೊಂದಿರುವ ಉದ್ಯಮಿಯೋರ್ವರ ಖಾತೆಗೆ ವರ್ಗಾವಣೆಗೊಂಡಿತ್ತು. ಅದರಲ್ಲಿ 10,000 ರೂ. ಅನ್ನು ಹಿಂದಿರುಗಿಸಿ ಉಳಿದ ಮೊತ್ತವನ್ನು ಹಿಂದಿರುಗಿಸದೆ ಸತಾಯಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಉಪ್ಪಿನಂಗಡಿಯ ಮಠ ಎನ್ನುವಲ್ಲಿ ಗ್ರಾನೈಟ್ ಉದ್ಯಮ ನಡೆಸಿಕೊಂಡಿರುವ ಹರಿರಾಮ್ ದೂರು ನೀಡಿದ್ದು,ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Comments are closed.