Kanpur: 21 ಬಾರಿ ತನ್ನ ಹೆಸರು ಬದಲಿಸಿಕೊಂಡ ಭಾರತದ ಏಕೈಕ ನಗರವಿದು!!

Share the Article

Kanpur : ಪ್ರಧಾನಿ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಹಲವಾರು ಐತಿಹಾಸಿಕ ನಗರಗಳ ಹೆಸರುಗಳನ್ನು ಬದಲಾಯಿಸಲಾಗಿದೆ. ಆದರೆ ಬರೋಬ್ಬರಿ 21 ಬಾರಿ ತನ್ನ ಹೆಸರನ್ನು ಬದಲಿಸಿಕೊಂಡ ಭಾರತದ ಏಕೈಕ ನಗರದ ಬಗ್ಗೆ ನಿಮಗೆ ಗೊತ್ತಿದೆಯೇ? 

ಹೌದು, ಉತ್ತರ ಪ್ರದೇಶದ ‘ಕಾನ್ಪುರ’ ಒಂದಲ್ಲ ಎರಡಲ್ಲ ಬರೋಬ್ಬರಿ 21 ಬಾರಿ ತನ್ನ ಹೆಸರನ್ನು ಬದಲಿಸಿಕೊಂಡ ಭಾರತದ ಏಕೈಕ ನಗರವಾಗಿದೆ. ಯಾರೂ ಊಹಿಸದ ಸಂಗತಿ ಇದಾಗಿದ್ದು ಭಾರತದ ಇತಿಹಾಸದಲ್ಲಿ ಇದೊಂದು ಅಚ್ಚರಿಯ ವಿಷಯವಾಗಿದೆ. 

ಕಾನ್ಪುರದ ಮೂಲ ಹೆಸರು ಕನ್ಹಾಪುರ. ಇದನ್ನು ಹಿಂದೂ ಸಿಂಗ್ ಚಂದೇಲ್ ಸ್ಥಾಪಿಸಿದರು. ಅಂದಿನಿಂದ, ಈ ನಗರದ ಹೆಸರು ಕಾಲಕಾಲಕ್ಕೆ ಬದಲಾಗಿದೆ. ಮೊಘಲರಿಂದ ಬ್ರಿಟಿಷರವರೆಗೆ ಎಲ್ಲರೂ ಅದರ ಹೆಸರನ್ನು ಬದಲಾಯಿಸಿದ್ದಾರೆ. ಬ್ರಿಟಿಷ್ ಆಳ್ವಿಕೆಯಲ್ಲಿ ಕಾನ್ಪುರವು ಪ್ರಮುಖ ಅಧಿಕಾರ ಕೇಂದ್ರವಾಗಿತ್ತು. ಕಾನ್ಪುರದ ಹೆಸರನ್ನು ಕೊನೆಯ ಬಾರಿಗೆ 1948 ರಲ್ಲಿ ಬದಲಾಯಿಸಲಾಗಿದ್ದು, ಅಂದಿನಿಂದ ನಗರದ ಹೆಸರನ್ನು ಮತ್ತೆ ಬದಲಾಯಿಸಲಾಗಿಲ್ಲ.

ಬ್ರಿಟಿಷ್ ಆಳ್ವಿಕೆಯಲ್ಲಿ, ನಗರವನ್ನು ಕಾನ್‌ಪೋರ್ ಎಂದು ಕರೆಯಲಾಗುತ್ತಿತ್ತು, ಆದರೆ ಸ್ವಾತಂತ್ರ್ಯದ ನಂತರ, ನಗರದ ಹೆಸರನ್ನು ಕಾನ್ಪುರ ಎಂದು ಬದಲಾಯಿಸಲಾಯಿತು. ಆ ಸಮಯದಲ್ಲಿ, ಅದು ಬಲವಾದ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿ ಹೊಂದಿದೆ

Comments are closed.