Viral Photo : ಪಕ್ಕದಲ್ಲಿ ಕುಳಿತವಳು ಯಾರೆಂದು ತಿಳಿಯದೇ ಬದಲಾಯ್ತು ಭಾರತೀಯನ ಲಕ್ – ಅದೃಷ್ಟ ಅಂದ್ರೆ ಇದೆ ಕಣ್ರೀ

Share the Article

Viral Photo : ಕೆಲವೊಮ್ಮೆ ಜೀವನದಲ್ಲಿ ಯಾವೆಲ್ಲ ರೀತಿಯ ಬದಲಾವಣೆಗಳು ಆಗುತ್ತವೆಂಬುದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಪರಿಚಿತರಿಂದ ಮಾತ್ರವಲ್ಲ ಅಪರಿಚಿತರಿಂದಲೂ ಕೂಡ ನಮ್ಮ ಜೀವನದಲ್ಲಿ ಕೆಲವೊಮ್ಮೆ ತಿರುವುಗಳು ಬಂದು ಅದು ನಮಗೆ ಅದೃಷ್ಟದ ಬಾಗಿಲಾಗಿ ಪರಿಣಮಿಸುತ್ತದೆ. ಇದೀಗ ಜರ್ಮನ್ ನಲ್ಲಿ ವಾಸಿಸುತ್ತಿರುವ ಭಾರತೀಯ ವ್ಯಕ್ತಿಯ ಜೀವನದಲ್ಲೂ ಇಂಥದ್ದೇ ಒಂದು ಘಟನೆ ನಡೆದಿದೆ.

ಹೌದು, ಜರ್ಮನಿಯ ಮೆಟ್ರೊದಲ್ಲಿ ಭಾರತದ ಯುವಕನೊಬ್ಬ ಪ್ರಯಾಣಿಸುತ್ತಿದ್ದ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಚಿತ್ರದಲ್ಲಿ ಯುವಕನ ಪಕ್ಕ ಯುತಿಯೊಬ್ಬಳು ಕುಳಿತಿದ್ದಾಳೆ. ಈ ಯುವತಿಯಿಂದಲೇ ಆ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಾರಣ ಪಕ್ಕದಲ್ಲಿ ಕುಳಿತ ಯುವತಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ‘ಗೇಮ್‌ ಆಫ್‌ ಥ್ರೋನ್ಸ್‌’ನ ನಟಿ ಮೇಝೀ ವಿಲಿಯಮ್ಸ್!!

ಯಸ್,  ಮೇಝೀ ವಿಲಿಯಮ್ಸ್ ಜೊತೆಗೆ ಒಂದು ಸೆಲ್ಫಿಗಾಗಿ ಇಡೀ ಜಗತ್ತೇ ತುದಿಗಾಲಲ್ಲಿ ನಿಂತಿರುವಾಗ, ಪಕ್ಕದಲ್ಲೇ ಇದ್ದರೂ ಯಾವುದೇ ಭಾವನೆಗಳಿಲ್ಲದೆ ಕುಳಿತಿದ್ದ ಯುವಕ ಜರ್ಮನಿಯಲ್ಲಿ ಸದ್ಯ ಸುದ್ದಿಯಲ್ಲಿದ್ದಾರೆ. ಮೆಟ್ರೊದಲ್ಲಿ ಎದುರಿಗೆ ಕುಳಿತಿದ್ದ ವ್ಯಕ್ತಿ ಈ ಚಿತ್ರ ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದರು. ಜರ್ಮನಿಯ ‘ದೆರ್‌ ಸ್ಪಿಗೆಲ್‌’ ಎಂಬ ಮಾಧ್ಯಮ ಆ ಯುವಕನಿಗಾಗಿ ವ್ಯಾಪಕ ಹುಡುಕಾಟ ನಡೆಸಿದೆ.

ಕೊನೆಗೆ ಅಂತಿಮವಾಗಿ ಭಾರತ ಮೂಲದ ಈ ಯುವಕ ಮ್ಯುನಿಕ್‌ನಲ್ಲಿ ಪತ್ತೆಯಾಗಿದ್ದಾನೆ. ಭಾರತದಿಂದ ಜರ್ಮನಿಗೆ ಅಕ್ರಮವಾಗಿ ತೆರಳಿರುವ ಈ ಯುವಕನ ಕುರಿತು ವರದಿಗಾರ, ‘ಮೆಟ್ರೊದಲ್ಲಿ ನಿಮ್ಮ ಪಕ್ಕ ಕುಳಿತ ಯುವತಿ ಮೇಝೀ ವಿಲಿಯಮ್ಸ್ ಎಂಬುದು ನಿಮಗೆ ಗೊತ್ತೇ? ಅವರು ಜನಪ್ರಿಯ ‘ಗೇಮ್‌ ಆಫ್ ಥ್ರೋನ್ಸ್‌’ನ ನಾಯಕಿ ಎಂಬುದು ತಿಳಿದಿದೆಯೇ? ಅವರೊಂದಿಗಿನ ಒಂದು ಸೆಲ್ಫಿಗಾಗಿ ಇಡೀ ಜಗತ್ತೇ ಕಾದಿರುವಾಗ, ನೀವು ಯಾವುದೇ ಪ್ರತಿಕ್ರಿಯೆ ನೀಡದೆ ಕುಳಿತಿದ್ದಿರಲ್ಲ.. ಏಕೆ?’ ಎಂದು ಕೇಳಿದ್ದಾರೆ.

ಆ ಪ್ರಶ್ನೆಗೆ ಆ ಯುವಕನ ಪ್ರಾಮಾಣಿಕ ಉತ್ತರ ಲಕ್ಷಾಂತರ ಹೃದಯವನ್ನು ಗೆದ್ದಿದೆ. ‘ನನ್ನ ಬಳಿ ಜರ್ಮನಿಯಲ್ಲಿ ವಾಸಿಸಲು ಪರವಾನಗಿ ಇಲ್ಲ. ಜೇಬಿನಲ್ಲಿ ಒಂದು ಯೂರೊ (ಕರೆನ್ಸಿ) ಕೂಡಾ ಇಲ್ಲ. ರೈಲಿನಲ್ಲಿ ನಿತ್ಯ ಅಕ್ರಮವಾಗಿಯೇ ಸಂಚರಿಸುತ್ತಿದ್ದೇನೆ. ಇಂಥ ಸಂದರ್ಭದಲ್ಲಿ ಪಕ್ಕದಲ್ಲಿ ಯಾರು ಕುಳಿತಿದ್ದಾರೆ ಎಂಬುದನ್ನು ಗಮನಿಸಲು ಸಾಧ್ಯವೇ?’ ಎಂದಿದ್ದಾರೆ. ಈ ಪ್ರಾಮಾಣಿಕ ಉತ್ತರಕ್ಕೆ ಮಾರು ಹೋದ ‘ದೆರ್‌ ಸ್ಪಿಗೆಲ್‌’ ಸಂಸ್ಥೆಯು, ತಕ್ಷಣ ಅವರಿಗೆ ಪೋಸ್ಟ್‌ಮ್ಯಾನ್ ಕೆಲಸ ನೀಡಿದ್ದಾರೆ. ಮಾಸಿಕ 800 ಯೂರೊ (₹83 ಸಾವಿರ) ವೇತನ. ಈ ಕೆಲಸದಿಂದ ಯುವಕನಿಗೆ ಜರ್ಮನಿಯಲ್ಲಿ ನೆಲೆಸಲು ಸುಲಭವಾಗಿ ಪರವಾನಗಿಯೂ ದೊರೆತಿದೆ. ಹೀಗೆ ಜೀವನದಲ್ಲಿ ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳು ನಮ್ಮ ಬದುಕನ್ನೇ ಬದಲಾಯಿಸಿ ಬಿಡುತ್ತವೆ.

Comments are closed.