GST: ಕೇಂದ್ರದಿಂದ GST ಪರಿಷ್ಕರಣೆ – 4.23 ಲಕ್ಷ ಇದ್ದ ಆಲ್ಟೋ K10 ಕಾರಿನ ಬೆಲೆ ಈಗ ಎಷ್ಟು?

Share the Article

GST: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಕ್ರಾಂತಿಯ ಬಗ್ಗೆ ಮಾತನಾಡಿದ್ದರು. ಹಲವು ವಸ್ತುಗಳ ಜಿಎಸ್‌ಟಿ (GST) ದರ ಇಳಿಸುವ ಮೂಲಕ ದೇಶದ ಜನರಿಗೆ ದೀಪಾವಳಿ ಉಡುಗೊರೆ ಕೊಡುವುದಾಗಿ ತಿಳಿಸಿದ್ದರು. ಅಂತೆಯೇ ಇದೀಗ ದೇಶದ ಜನತೆಗೆ ದೀಪಾವಳಿಗೆ ಹಾಗೂ ದಸರ ಹಬ್ಬಕ್ಕೆ ಭರ್ಜರಿ ಉಡುಗೊರೆ ಸಿಕ್ಕಿದೆ. ಈ ಮೂಲಕ ದೇಶದಲ್ಲಿ ಅನೇಕ ವಸ್ತುಗಳು ಜಿಎಸ್‌ಟಿ ಮುಕ್ತವಾಗಿವೆ. ಕಾರು ಬೈಕ್ ಸೇರಿದಂತೆ ಅನೇಕ ವಾಹನಗಳ ಬೆಲೆ ಅಗ್ಗವಾಗಿದೆ. ಹಾಗಾದರೆ ಜಿಎಸ್‌ಟಿ ಪರಿಷ್ಕರಣೆ ಬಳಿಕ 10 ಲಕ್ಷ ಕಾರಿನ ಬೆಲೆ ಈಗ ಎಷ್ಟಾಗುತ್ತೆ ಗೊತ್ತಾ?

ಕಾರು ಮತ್ತು ಬೈಕ್‌ಗಳ ಮೇಲಿನ GST ದರವನ್ನು ಶೇ.28ರಿಂದ ಶೇ.18ಕ್ಕೆ ಇಳಿಸಲು ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸಿದೆ. ಇದರಿಂದಾಗಿ ಕಾರುಗಳು ಮತ್ತು ಬೈಕ್‌ಗಳ ಬೆಲೆಗಳು ಕಡಿಮೆಯಾಗಲಿವೆ. ಅಂತಹ ಪರಿಸ್ಥಿತಿಯಲ್ಲಿ, ಸಣ್ಣ ಕಾರುಗಳ ಬೆಲೆಯನ್ನು ಸುಮಾರು 7-8% ರಷ್ಟು ಕಡಿಮೆ ಮಾಡಬಹುದು. GST 2.0 ಜಾರಿಗೆ ಬಂದ ನಂತರ ಆರಂಭಿಕ ಹಂತದ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆಗಳು ಗಣನೀಯವಾಗಿ ಕಡಿಮೆಯಾಗಬಹುದು. ಇದು ಸಾಮಾನ್ಯ ಜನರಿಗೆ ಕಾರು ಖರೀದಿಸುವ ಕನಸನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ:GST: ಟಿವಿ, ಎಸಿ, ವಾಷಿಂಗ್ ಮಷೀನ್ ಕೊಳ್ಳುವ ಪ್ಲಾನ್ ಇದೆಯಾ? ಹಾಗಿದ್ರೆ ಈ ದಿನಾಂಕದ ಬಳಿಕ ಖರೀದಿಸಿ, ಹಣ ಉಳಿಸಿ

ಸದ್ಯ 4 ಮೀಟರ್‌ಗಿಂತ ಚಿಕ್ಕದಾದ ಮತ್ತು 1.2 ಲೀಟರ್ ಎಂಜಿನ್ ಹೊಂದಿರುವ ಕಾರುಗಳು 28% GST ಜೊತೆಗೆ 1-3% ಸೆಸ್ ಅನ್ನು ವಿಧಿಸುತ್ತವೆ. ಇದರರ್ಥ ಒಟ್ಟು ತೆರಿಗೆ ಸುಮಾರು 29-31% ಆಗುತ್ತದೆ. ಆದರೆ ಪ್ರಸ್ತಾವಿತ ಬದಲಾವಣೆಯ ನಂತರ, ಈ ವಾಹನಗಳು 18% ಸ್ಲ್ಯಾಬ್‌ನಲ್ಲಿ ಬಂದಿವೆ. ಇದು ಬೆಲೆಯಲ್ಲಿ ಸುಮಾರು 8% ರಷ್ಟು ಇಳಿಕೆಗೆ ಕಾರಣವಾಗಬಹುದು. ಉದಾಹರಣೆಗೆ, ಪ್ರಸ್ತುತ 4.23 ಲಕ್ಷ ರೂ.ಗಳಿಂದ ಪ್ರಾರಂಭವಾಗುವ ಮಾರುತಿ ಆಲ್ಟೊ ಕೆ10 (Maruti Alto K10) ಅನ್ನು ಹೊಸ ತೆರಿಗೆ ರಚನೆಯ ನಂತರ ಸುಮಾರು 3.89 ಲಕ್ಷ ರೂ.ಗಳಿಗೆ ಖರೀದಿಸಬಹುದು.

Comments are closed.