Murder: ಅಂಗನವಾಡಿಯಲ್ಲಿ ಚಾಕು ಇರಿದು ಯುವಕನ ಬರ್ಬರ ಹತ್ಯೆ

Share the Article

Murder: ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ (murder) ಅಂತ್ಯ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಅಂಗನವಾಡಿ ಕೇಂದ್ರದಲ್ಲಿ ನಡೆದಿದೆ.

ಯಾಸೀರ್ ಜಾತಗಾರ(24) ಎಂಬಾತನನ್ನು ಕೊಲೆಗೈದು ರೋಹಿತ್ ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಎಸ್​ಪಿ ಭೀಮಾಶಂಕರ್ ಗುಳೇದ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದೆ. ಬಳಿಕ ಚಾಕುವಿನಿಂದ ಇರಿದು ಯಾಸೀರ್​ನನ್ನ ರೋಹಿತ್ ಕೊಲೆ ಮಾಡಿದ್ದಾನೆ.

ಇದನ್ನೂ ಓದಿ:B Y Vijayendra: ಈಶ್ವರಪ್ಪ ಮತ್ತೆ ಬಿಜೆಪಿ ಸೇರ್ಪಡೆ? ವಿಜೇಂದ್ರ ಹೇಳಿದ್ದೇನು ಗೊತ್ತಾ?

Comments are closed.