Cooking Oil: ಗ್ರಾಹಕರಿಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ ದರ ಇಳಿಕೆ

Share the Article

Cooking Oil: ಖಾದ್ಯ ತೈಲ ದರ ಇಳಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರಕಾರ ಕಂಪನಿಗಳಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇದೀಗ ಖಾದ್ಯ ತೈಲದ ಆಮದು ಸುಂಕವನ್ನು ಶೇ.20 ರಿಂದ ಶೇ.10 ಕ್ಕೆ ಇಳಿಕೆ ಮಾಡಿದೆ.

ಚಿಲ್ಲರೆ ದರವನ್ನು ಕಡಿಮೆ ಮಾಡಿ ಗ್ರಾಹಕರ ಹೊರೆಯನ್ನು ತಗ್ಗಿಸಲು ಕೇಂದ್ರ ಸರಕಾರ ಕಳೆದ ತಿಂಗಳು ಹೇಳಿತ್ತು. ಇದರ ಲಾಭ ಗ್ರಾಹಕರಿಗೆ ತಲುಪಿದೆಯೇ ಎಂದು ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್‌ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದೆ.

ಖಾದ್ಯ ತೈಲ ಬೆಲೆ ಹೆಚ್ಚಿದ್ದು, ಕೇಂದ್ರ ಸರಕಾರ ಈ ಕುರಿತು ಅನೇಕ ಕ್ರಮ ಕೈಗೊಂಡಿದೆ. ಆಮದು ಸುಂಕವನ್ನು ಇಳಿಕೆ ಮಾಡಿ ಗ್ರಾಹಕರಿಗೆ ಉಪಯುಕ್ತವಾಗುವಂತೆ ಮಾಡಲು ಮುಂದಾಗಿದೆ.

ಇದನ್ನೂ ಓದಿ:Bangalore: ಹಸುವಿನ ಕೆಚ್ಚಲು ಕೊಯ್ದು ವಿಕೃತಿ

Comments are closed.