AIR India : ಅಪಘಾತಕ್ಕೀಡಾದ AIR India ವಿಮಾನದ ಮಾಲೀಕರು ಯಾರು? ಇದರ ಹಿನ್ನೆಲೆ ಏನು? ದೇಶಕ್ಕೆ ಇವರ ಕೊಡುಗೆ ಅಪಾರ ಗೊತ್ತಾ?

AIR India : ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ 242 ಪ್ರಯಾಣಿಕರಲ್ಲಿ 241 ಮಂದಿ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಒರ್ವ ಪ್ರಯಾಣಿಕೆ ಬದುಕುಳಿದಿದ್ದಾನೆ. ಅಲ್ಲದೆ, ಈ ಅಪಘಾತದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪನಿಯವರು (Vijay Rupani death) ನಿಧನರಾಗಿದ್ದಾರೆ. ಹಾಗಿದ್ದರೆ ಅಪಘಾತಕ್ಕೀಡಾದ AIR India ವಿಮಾನದ ಮಾಲೀಕರು ಯಾರು? ಇದರ ಇತಿಹಾಸವೇನು? ಇಲ್ಲಿದೆ ನೋಡಿ ಡೀಟೇಲ್ಸ್.

ಏರ್ ಇಂಡಿಯಾವನ್ನು ಆರಂಭದಲ್ಲಿ ಜೆ.ಆರ್.ಡಿ. ಟಾಟಾ ಅವರು 1932 ರಲ್ಲಿ “ಟಾಟಾ ಏರ್ಲೈನ್ಸ್” ಆಗಿ ಸ್ಥಾಪಿಸಿದರು, ಆದರೆ ಇದನ್ನು 1953 ರಲ್ಲಿ ರಾಷ್ಟ್ರೀಕರಣಗೊಳಿಸಲಾಯಿತು. 2021 ರವರೆಗೆ ಸರ್ಕಾರದ ನಿಯಂತ್ರಣದಲ್ಲಿದ್ದರು ರತನ್ ಟಾಟಾ ಅವರ ನಾಯಕತ್ವದಲ್ಲಿ ಟಾಟಾ ಗ್ರೂಪ್ 2022ರಲ್ಲಿ ಅದನ್ನು ಸ್ವಾಧೀನಪಡಿಸಿಕೊಂಡಿತು.
ಹೌದು, 1932 ರಲ್ಲಿ ಸ್ಥಾಪನೆಯಾದ ಏರ್ ಇಂಡಿಯಾ, 1953 ರಿಂದ 2022 ರವರೆಗೆ ಭಾರತ ಸರ್ಕಾರದ (AIR India TATA) ಒಡೆತನದಲ್ಲಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದ ಅತ್ಯಂತ ಪ್ರತಿಷ್ಠಿತ ವ್ಯಾಪಾರ ಸಮೂಹ ಸಂಸ್ಥೆ ಟಾಟಾ ಗ್ರೂಪ್‌ಗೆ (Air India owner) ಅದನ್ನು ಮಾರಿತು. ಅಕ್ಟೋಬರ್ 2021 ರಲ್ಲಿ ಟಾಟಾ ಗ್ರೂಪ್ ಬಿಡ್ ಗೆದ್ದ ನಂತರ ಹಸ್ತಾಂತರ ನಡೆಯಿತು. ಟಾಟಾ ಗ್ರೂಪ್ ತನ್ನ ಅಂಗಸಂಸ್ಥೆಯಾದ ಟೇಲೇಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಏರ್‌ಲೈನ್‌ನಲ್ಲಿ 100% ಪಾಲನ್ನು ಪಡೆದುಕೊಂಡಿದೆ. ಪ್ರಸ್ತುತ ಟಾಟಾ ಟ್ರಸ್ಟ್‌ಗಳ ಅಧ್ಯಕ್ಷರಾಗಿ ನೋಯೆಲ್ ಟಾಟಾ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ಯಾಂಪ್‌ಬೆಲ್ ವಿಲ್ಸನ್, ಏರ್ ಇಂಡಿಯಾದ ಎಂಡಿ ಮತ್ತು ಸಿಇಒ ಆಗಿದ್ದಾರೆ.
Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?
Comments are closed.