Sanjay Kapur Death: ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ನಿಧನ

Share the Article

Sanjay Kapur Death: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ 53 ನೇ ವಯಸ್ಸಿನಲ್ಲಿ ಯುಕೆಯಲ್ಲಿ ನಿಧನ ಹೊಂದಿದ್ದಾರೆ. ಪೋಲೋ ಪಂದ್ಯದ ಸಮಯದಲ್ಲಿ ಸಂಜಯ್ ಕಪೂರ್ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರ ನಿಧನದಿಂದ ಅವರ ಕುಟುಂಬ ಮತ್ತು ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ.

ಸಂಜಯ್ ಕಪೂರ್ ಗಾರ್ಡ್ಸ್ ಪೋಲೊ ಕ್ಲಬ್‌ನಲ್ಲಿ ಪೋಲೊ ಆಡುತ್ತಿದ್ದರು ಎಂದು ಅವರ ಆಪ್ತ ಮೂಲಗಳು ತಿಳಿಸಿರುವ ಕುರಿತು ವರದಿಯಾಗಿದೆ. ಕೆಲ ಹೊತ್ತಿನಲ್ಲಿ ಅವರು ಆಟವನ್ನು ನಿಲ್ಲಿಸಲು ವಿನಂತಿಸಿ ನಂತರ ಮೈದಾನದಿಂದ ಹೊರನಡೆದಿದ್ದಾರೆ. ವರದಿಯ ಪ್ರಕಾರ, ಸಂಜಯ್ ಕಪೂರ್ ಹೃದಯಾಘಾತಕ್ಕೊಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಂಜಯ್ ಕಪೂರ್ ಉದ್ಯಮಿಯಾಗಿದ್ದರು. ಅವರು ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷರಾಗಿದ್ದರು ಮತ್ತು ಭಾರತೀಯ ಆಟೋಮೋಟಿವ್ ಉದ್ಯಮದ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಪೋಲೊ ಉತ್ಸಾಹಿಯಾಗಿದ್ದ ಅವರು ಸೋನಾ ಪೋಲೊ ತಂಡವನ್ನು ಹೊಂದಿದ್ದರು ಮತ್ತು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಿದ್ದರು.

ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್ 2003 ರಲ್ಲಿ ವಿವಾಹವಾಗಿದ್ದು, ಆದರೆ ಅವರ ದಾಂಪತ್ಯವು ಮುರಿದು ಬಿತ್ತು. 2014 ರಲ್ಲಿ ಇವರಿಬ್ಬರು ಕಾನೂನು ರೀತಿಯಲ್ಲಿ ಬೇರ್ಪಟ್ಟರು. ಇವರಿಬ್ಬರಿಗೆ ಇಬ್ಬರು ಮಕ್ಕಳಿದ್ದು, ಮಗಳು ಸಮೈರಾ ಮತ್ತು ಮಗ ಕಿಯಾನ್ ಕರಿಷ್ಮಾ ಜೊತೆ ಇದ್ದಾರೆ.

ಕರಿಷ್ಮಾ ಕಪೂರ್ ಅವರಿಂದ ವಿಚ್ಛೇದನ ಪಡೆದ ಕೆಲವು ವರ್ಷಗಳ ನಂತರ ಸಂಜಯ್ ಕಪೂರ್ ಮಾಡೆಲ್ ಮತ್ತು ಉದ್ಯಮಿ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ, ಅವನಿಗೆ ಅಜರಿಯಾಸ್ ಕಪೂರ್ ಎಂದು ಹೆಸರಿಡಲಾಗಿದೆ.

Comments are closed.