Air India Plane Crash: ವಿಮಾನ ಬಿದ್ದಾಗ ಅದರಲ್ಲಿದ್ದ ವಿಶ್ವಾಸ್ ಪಾರಾಗಿದ್ದೇ ಪವಾಡ! ಹೇಗೆ? ಮೇಲಿಂದ ಹಾರಿದ್ರಾ? ವಿವರ ಇಲ್ಲಿದೆ

Share the Article

Air India Plane Crash: ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಭಾರತದ ಪಶ್ಚಿಮ ನಗರವಾದ ಅಹಮದಾಬಾದ್‌ನಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಭಾರಿ ಬೆಂಕಿಯ ಉಂಡೆಯಾಗಿ ಪತನಗೊಂಡು, ಅದರಲ್ಲಿದ್ದ ಒಬ್ಬ ಪ್ರಯಾಣಿಕರನ್ನು ಹೊರತುಪಡಿಸಿ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದರು.

ವಿಮಾನದಲ್ಲಿದ್ದ 242 ಜನರಲ್ಲಿ 241 ಜನರು ಬದುಕುಳಿಯಲಿಲ್ಲ ಎಂದು ಏರ್ ಇಂಡಿಯಾ ದೃಢಪಡಿಸಿದೆ, ಒಬ್ಬ ಬ್ರಿಟಿಷ್ ಪ್ರಜೆ ಮಾತ್ರ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾರೆ. ವಿಮಾನ ಅಪಘಾತಕ್ಕೀಡಾದಾಗ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್ ಕುಮಾರ್ ರಮೇಶ್ (40) 11A ಸೀಟಿನಲ್ಲಿ ಕುಳಿತಿದ್ದರು. ವಿಮಾನವು ವಸತಿ ಪ್ರದೇಶಕ್ಕೆ ಅಪ್ಪಳಿಸುವ ಮುನ್ನ ಕ್ಷಣಗಳನ್ನು ವಿವರಿಸುತ್ತಾ ಅವರು, ನಾನು ಸೈಡ್​ನಲ್ಲಿದ್ದೆ ಅಲ್ವಾ? ಆ ಭಾಗ ಹಾಸ್ಟೆಲ್​ ಮೇಲೆ ಲ್ಯಾಂಡ್​ ಆಗಿರಲಿಲ್ಲ. ಹಾಸ್ಟೆಲ್​ನ ಗ್ರೌಂಡ್ ಫ್ಲೋರ್​ ಇದೆಯಲ್ಲ ಕೆಳಗೆ? ಅಲ್ಲಿ ಲ್ಯಾಂಡಾಗಿತ್ತು. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ನಾನು ಲ್ಯಾಂಡಾಗಿದ್ದು ಕೆಳಗಿನ ಭಾಗದಲ್ಲಿ ಅಲ್ಲಿ ವಿಮಾನದ ಹೊರಗೆ ಸ್ವಲ್ಪ ಜಾಗ ಕೂಡ ಇತ್ತು. ನನ್ನ ಕಡೆಯ ಬಾಗಿಲು ಮುರಿದಿತ್ತು. ನನಗೆ ಅಲ್ಲಿ ಸ್ವಲ್ಪ ಜಾಗ ಕಾಣಿಸಿದಾಗ ನಾನು ಹೊರಗೆ ಬರಲು ಪ್ರಯತ್ನಿಸಬಹುದೆನಿಸಿತು. ನಾನು ಹೊರ ಬರಲು ಪ್ರಯತ್ನಿಸಿದೆ. ಮತ್ತೆ ನಾನು ಹೊರಗೆ ಬಂದೆ.

ವಿರುದ್ಧ ದಿಕ್ಕಿನಲ್ಲಿ ಕಟ್ಟಡದ ಗೋಡೆ ಇತ್ತು. ಹೀಗಾಗಿಯೇ ಅಲ್ಲಿಂದ ಯಾರೂ ಹೊರಗೆ ಬರೋಕೆ ಆಗಿರಲಿಕ್ಕಿಲ್ಲ. ಅಲ್ಲೇ ಕ್ಯ್ರಾಶ್ ಆಗಿತ್ತು. ನಾನಿದ್ದಲ್ಲೇ ಸ್ವಲ್ಪ ಜಾಗ ಇತ್ತು. ಆದರೂ ನಾನು ಹೇಗೆ ಪಾರಾದೆ ಎಂದು ಗೊತ್ತಿಲ್ಲ. ನನ್ನ ಕಣ್ಣೆದುರೇ ಇಬ್ಬರು ಏರ್ ಹೋಸ್ಟೆಸ್​ ಎಲ್ಲರೂ.. ಅಲ್ಲೇ.. ಎಂದು ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

ಪ್ರಯಾಣಿಕರಲ್ಲಿ 169 ಭಾರತೀಯರು, 53 ಬ್ರಿಟನ್ನರು, ಏಳು ಪೋರ್ಚುಗೀಸ್ ನಾಗರಿಕರು ಮತ್ತು ಒಬ್ಬ ಕೆನಡಾದವರು ಸೇರಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ. “ವಿಮಾನ ಅಪಘಾತಕ್ಕೀಡಾದ ಕಟ್ಟಡದಲ್ಲಿ ಸಾವನ್ನಪ್ಪಿದವರು ಸೇರಿದಂತೆ ನಾವು ಇನ್ನೂ ಸತ್ತವರ ಸಂಖ್ಯೆಯನ್ನು ಪರಿಶೀಲಿಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.