Karkala: ನಾಯಿಗೆ ವಿಷ ಹಾಕಿ ಕೊಂದ ಪ್ರಕರಣ: ಮಾಹಿತಿ ನೀಡಿದರೆ ರೂ.50 ಸಾವಿರ ಬಹುಮಾನ

Karkala: ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಯಿಗೆ ವಿಷ ಹಾಕಿ ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೆಟಾ ಸಂಸ್ಥೆ 50 ಸಾವಿರ ರೂ. ಬಹುಮಾನ ಘೋಷಣೆ ಮಾಡಿದೆ.
ವಿಷ್ಣುಮೂರ್ತಿ ದೇವಸ್ಥಾನ ಪರಿಸರದಲ್ಲಿ ಜೂ.6 ರಂದು ನಾಯಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ಮಾಡಿದಾಗ ನಾಯಿಗೆ ವಿಷ ಉಣಿಸಿರುವುದು ತಿಳಿದು ಬಂದಿದೆ. ಪೊಲೀಸರು ಈ ಕುರಿತು ತನಿಖೆ ಮಾಡಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.
ಪೆಟಾ ಸಂಸ್ಥೆ ಈ ಕುರಿತು ಮಾಹಿತಿಯನ್ನು ಪಡೆದಿದೆ. ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಮೆಚ್ಚಿದ್ದಾರೆ. ಇದರ ಜೊತೆಗೆ ನಾಯಿಗೆ ವಿಷ ಹಾಕಿದ ಆರೋಪಿಗಳ ಮಾಹಿತಿಯನ್ನು ನೀಡಿದ್ದಲ್ಲಿ ರೂ.50 ಸಾವಿರ ಬಹುಮಾನ ಘೋಷಣೆ ಮಾಡಿದೆ. ಹಾಗೂ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದೆ.
Comments are closed.