Oparation sindoor: ಆಪರೇಷನ್ ಸಿಂಧೂ‌ರ್: ಭಾರತೀಯ ವಾಯುಪಡೆಯಲ್ಲಿ ಹೊಸ ಪಕೋಡ ಹವಾ!

Share the Article

Oparation sindoor: ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕಭಾರತೀಯ ಸೇನೆಯು ‘ಆಪರೇಷನ್‌ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿತು. ಆ ನಂತರ ಭಾರತ ಮತ್ತು ಪಾಕಿಸ್ತಾನ ಎರಡೂ ಪರಸ್ಪರ ಡೋನ್ ದಾಳಿಗಳನ್ನು ನಡೆಸಿದವು. ಇದೀಗ ಡೋನ್‌ಗಳು ಖಾದ್ಯ ರೂಪ ಪಡೆದಿದ್ದು, ಭಾರೀ ವೈರಲ್ ಆಗುತ್ತಿದೆ.

ವೈರಲ್ ಆಗಿರುವ ಪೋಸ್ಟ್‌ನಲ್ಲಿ ಭಾರತೀಯ ವಾಯುಪಡೆಯಲ್ಲಿ ಬೆಳಗ್ಗಿನ ಉಪಾಹಾರವಾಗಿ ಡೋನ್ ಪಕೋಡಾಗಳನ್ನು ನೀಡಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ಡೋನ್ ಪಕೋಡಾಗಳ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ.

ನಿವೃತ್ತ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ತಮ್ಮ ಎಕ್ಸ್ ಖಾತೆಯಲ್ಲಿ ಈ ವಿಶಿಷ್ಟ ತಿಂಡಿಯ ಚಿತ್ರವನ್ನು ಹಂಚಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಇದು ಸಾಂಪ್ರದಾಯಿಕ ಕರಿದ ತಿಂಡಿಗಿಂತ ಸಂಪೂರ್ಣವಾಗಿ ಭಿನ್ನವಾದ ಡೋನ್‌ಗಳ ಆಕಾರದ ಮೂರು ಪಕೋಡಾಗಳನ್ನು ತೋರಿಸಿದೆ. ಅಲ್ಲದೇ “ಡೋನ್ ಪಕೋಡಾಗಳು… ವಾಯು ರಕ್ಷಣಾ ರೆಜಿಮೆಂಟ್‌ನಲ್ಲಿ ಹೊಸ ತಿಂಡಿ. ಜೈ ಹಿಂದ್ ಎಂದು ಶೀರ್ಷಿಕೆ ಕೂಡ ನೀಡಿದ್ದಾರೆ.

Comments are closed.