Bengaluru : ಸಿಎಂ ಯೋಗಿಯಂತೆ ಡೇರಿಂಗ್ ರಾಜಕೀಯ ನಾಯಕನಾಗುವೆ – SSLC ಟಾಪರ್ ವಿದ್ಯಾರ್ಥಿಯ ಹೇಳಿಕೆ

Bengaluru : 2025 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದ್ದು ಫಸ್ಟ್ ರ್ಯಾಂಕ್ ಬಂದವರು ಕುಣಿದು ಕುಪ್ಪಳಿಸಿದ್ದಾರೆ. ಕುಟುಂಬಸ್ಥರು ಸ್ನೇಹಿತರಿಗೆ ಸಿಹಿ ತಿನ್ನಿಸಿ ಫುಲ್ ಎಂಜಾಯ್ ಮಾಡಿದ್ದಾರೆ. ಜೊತೆಗೆ ಮಾಧ್ಯಮಗಳೊಂದಿಗೆ ಮಾತನಾಡಿಸುತ್ತಾ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದಾರೆ.
ಅಂತೆಯೇ ಬೆಂಗಳೂರಿನ ಹೋಲಿ ಚೈಲ್ಡ್ ಇಂಗ್ಲೀಷ್ ಹೈಸ್ಕೂಲ್ 625ಕ್ಕೆ 624 ಅಂಕ ಪಡೆದು ಸಾಧನೆ ಮಾಡಿರೋ ಮಿಥುನ್ ಎಂಬ ವಿದ್ಯಾರ್ಥಿಯನ್ನು ಮಾಧ್ಯಮದವರು ಮಾತನಾಡಿಸಿದ್ದು, ಮುಂದೆ ಏನಾಗಬೇಕೆಂದು ಕನಸು ಇದೆ ಎಂದು ಕೇಳಿದ್ದಾರೆ. ಇದಕ್ಕೆ ಆ ವಿದ್ಯಾರ್ಥಿ ಯೋಗಿ ಆದಿತ್ಯನಾಥ್ ರಂತೆ ರಾಜಕೀಯ ನಾಯಕ ಆಗುತ್ತೇನೆ ಎಂದಿದ್ದಾರೆ. ಹೌದು, ನಾನು ರಾಜಕೀಯ ನಾಯಕ ಆಗಬೇಕು. ಯೋಗಿ ಆದಿತ್ಯನಾಥ್ ರೀತಿ ಡೇರಿಂಗ್ ಪೊಲಿಟಿಷಿಯನ್ ಆಗುತ್ತೇನೆ ಎಂದು ಹೇಳಿದ್ದಾನೆ.
Comments are closed.