Udupi: ಲಾಡ್ಜ್‌ನಲ್ಲಿ ಮಾದಕ ವಸ್ತುಗಳ ಸಹಿತ ಮೂವರ ಬಂಧನ!

Share the Article

Udupi: 80 ಬಡಗಬೆಟ್ಟು ಗ್ರಾಮದ ದಶರಥ ನಗರದ ಲಾಡ್ಜ್‌ ಒಂದರಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಬಂಧನ ಮಾಡಲಾಗಿದೆ. ಮಂಗಳವಾರ ಎ.22 ರಂದು ಬಂಧನ ಮಾಡಲಾಗಿದೆ.

ಮಾದಕವಸ್ತುವನ್ನು ತೆಗೆದುಕೊಳ್ಳಲು ಉಪಯೋಗಿಸುವ ಸಿರಿಂಜ್‌ಗಳನ್ನು ಹೊಂದಿದ ಮಾಹಿತಿ ಆಧರಿಸಿ ಮಣಿಪಾಲ ಠಾಣೆ ಪೊಲೀಸರು ಕಾರ್ಯಾಚರಣೆ ಮಾಡಿ ಬಂಧನ ಮಾಡಿದ್ದಾರೆ.

ಕಾಪುವಿನ ಮಂಚಕಲ್‌ ಅಜರುದ್ದೀನ್‌, ಮಹಾರಾಷ್ಟ್ರದ ಪುಣೆಯ ರಾಜೇಶ್‌ ಪ್ರಕಾಶ್‌ ಜಾದವ್‌, ಮಲ್ಪೆಯ ನಾಜೀಲ್‌ (ಆಶಿಪ್‌) ಬಂಧಿತ ಆರೋಪಿಗಳು.

ಇವರಿಂದ 40 ಸಾವಿರ ರೂ ಮೌಲ್ಯದ 13.70 ಗ್ರಾಂ ತೂಕದ MDMA, 10,500 ರೂ ಮೌಲ್ಯದ 225 ಗ್ರಾಂ ಗಾಂಜಾ, ಪ್ಲಾಸ್ಟಿಕ್‌ ಕವರ್‌ಗಳು, 5 ಸಿರಿಂಜ್‌ಗಳು, Sterile water 5 ml ನ 3 ಪ್ಲಾಸ್ಟಿಕ್‌ ಸೀಸ, ಮೊಬೈಲ್‌ ವಶಪಡಿಸಲಾಗಿದೆ.

ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.