Bengaluru : ರೈಲ್ವೆ ಹಳಿ ಬಳಿ ಸೂಟ್ ಕೇಸ್ ನಲ್ಲಿ ಅಪರಿಚಿತ ಬಾಲಕಿ ಶವ ಪತ್ತೆ -ರೈಲಿನಿಂದ ಎಸೆದು ಹೋಗಿರುವ ಶಂಕೆ!

Bengaluru : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಹಳಿ ಬಳಿ ಸೂಟ್ಕೇಸ್ ಅಲ್ಲಿ ಬಾಲಕಿಯ ರುಂಡ ಮತ್ತು ಮುಂಡ ಬೇರ್ಪಡಿಸಿರುವ ಮೃತದೇಹ ಪತ್ತೆಯಾಗಿದೆ.
ಹೌದು ಬಾಲಕಿಯ ಶವವೊಂದು ರುಂಡ – ಮುಂಡ ಕತ್ತರಿಸಿದ ಸ್ಥಿತಿಯಲ್ಲಿ, ಮುಚ್ಚಿದ ನೀಲಿ ಸೂಟ್ ಕೇಸ್ವೊಂದರಲ್ಲಿ ಪತ್ತೆಯಾದ ಆತಂಕಕಾರಿ ಘಟನೆ ಹಳೆ ಚಂದಾಪುರ ರೈಲ್ವೇ ಹಳಿ ಬಳಿ ನಡೆದಿದೆ. ಬಾಲಕಿಗೆ ಸುಮಾರು ಒಂಬತ್ತು ವರ್ಷ ವಯಸ್ಸಾಗಿದೆ ಎಂದು ತಿಳಿದು ಬಂದಿದೆ.
ಚಲಿಸುವ ರೈಲಿನಿಂದ ಬಾಲಕಿಯನ್ನು ಶವವನ್ನು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರಿಂದ ಭೇಟಿ ಪರಿಶೀಲನೆ ನಡೆಸಿದ್ದಾರೆ. ಬೈಯಪ್ಪನ ಹಳ್ಳಿ ರೈಲ್ವೇ ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸೂರ್ಯನಗರ ಪೊಲೀಸ್ ಠಾಣೆ ಹಾಗೂ ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.