Kumbh Mela: ಕುಂಭಮೇಳ ಕಾಲ್ತುಳಿತದಲ್ಲಿ ಸತ್ತಿದ್ದ ಎನ್ನಲಾದ ವ್ಯಕ್ತಿ ತಿಥಿ ದಿನ ಪ್ರತ್ಯಕ್ಷ

Share the Article

Kumbh Mela: ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ವೇಳೆ ಜ.29 ರಂದು ಕಾಲ್ತುಳಿತ ಸಂಭವಿಸಿದ್ದು, ಮೃತಪಟ್ಟಿದ್ದಾನೆ ಎಂದು ಭಾವಿಸಲಾಗಿದ್ದ ವ್ಯಕ್ತಿ ಮಂಗಳವಾರ 13 ನೇ ದಿನದ ಕಾರ್ಯದ ವೇಳೆ ಮನೆಗೆ ಮರಳಿರುವುದರಿಂದ
ಮಿತ್ರರು, ನೆರೆಹೊರೆಯವರಲ್ಲಿ ಅಚ್ಚರಿಯ ಜೊತೆಗೆ ಸಂಭ್ರಮ ಉಂಟು ಮಾಡಿದೆ. ತಿಥಿ ಊಟವು ವ್ಯಕ್ತಿಯ ಆಗಮನದಿಂದ ಭೋಜನ ಕೂಟವಾಗಿ ಪರಿವರ್ತನೆಯಾಯಿತು. ಪ್ರಯಾಗರಾಜ್‌ನವರೇ ಆದ ಖುಂತಿ ಗುರು ಎಂಬ ವ್ಯಕ್ತಿ, ಝೀರೋ ರೋಡ್‌ನ ಛಂಛಡ್‌ಗಲ್ಲಿ ಪ್ರದೇಶದಲ್ಲಿ ಪೂರ್ವಜರಿಂದ ಬಂದ ಚಿಕ್ಕ ಕೊಠಡಿಯಲ್ಲಿ ಒಬ್ಬನೇ ವಾಸಿಸುತಿದ್ದು, ಕುಟುಂಬ ಸದಸ್ಯರು ಇಲ್ಲ. ಆತನ ತಂದೆ ಕನ್ಹಯ್ಯ ಲಾಲ್‌ ಒಬ್ಬ ಪ್ರತಿಷ್ಠ ವಕೀಲ ಎಂದು ಸ್ಥಳೀಯರು ಹೇಳಿದ್ದಾರೆ. ಗುರುಗೆ ಪ್ರತಿನಿತ್ಯ ಸ್ಥಳೀಯ ನೆರೆಹೊರೆಯವರು, ಅಂಗಡಿಯವರು ಆಹಾರ ಮತ್ತು ಮತ್ತಿತರ ಅಗತ್ಯ ವ್ಯಸ್ತುಗಳನ್ನು ಒದಗಿಸುತ್ತಿದ್ದರು.

Comments are closed.