of your HTML document.

BJP: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಬಿಗ್ ಶಾಕ್ ಕೊಟ್ಟ ಹೈಕಮಾಂಡ್

BJP: ಇತ್ತೀಚಿಗಷ್ಟೇ ರಾಜ್ಯದಲ್ಲಿ 23 ಜಿಲ್ಲೆಗಳಿಗೆ ನೂತನ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿತ್ತು. ಈ ಬೆನ್ನಲ್ಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ವ್ಯಾಪಕ ಆಕ್ರೋಶ ಕೂಡ ಕೇಳಿಬಂದಿತ್ತು. ಅದರಲ್ಲೂ ಚಿಕ್ಕಬಳ್ಳಾಪುರದ ಜಿಲ್ಲಾಧ್ಯಕ್ಷರ ಆಯ್ಕೆ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಕಾರಣ ಸಂಸದ ಡಾಕ್ಟರ್ ಕೆ ಸುಧಾಕರ್ ಅವರು ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ಕಿಡಿ ಕಾರಿದ್ದರು. ಇದೀಗ ಈ ವಿಚಾರವಾಗಿ ಬಿಜೆಪಿ ಹೈಕಮಾಂಡ್ ವಿಜಯೇಂದ್ರ ಅವರಿಗೆ ಶಾಕ್ ನೀಡಿದೆ.

ಯಸ್, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕೆ ಬಿಜೆಪಿ ಸಂಸದ ಡಾ. ಕೆ ಸುಧಾಕರ್ ಹಾಗೂ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಡುವೆ ಮಾತಿನ ಸಮರಕ್ಕೆ ನಾಂದಿಯಾಡಿತ್ತು. ಇನ್ನು ಜಿಲ್ಲಾಧ್ಯಕ್ಷ ಆಯ್ಕೆಯಲ್ಲಿ ಬಿವೈ ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಂದೀಪ್ ಆಯ್ಕೆಯನ್ನು ಸುಧಾಕರ್ ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೆ ಬಿಜೆಪಿ ಹೈಕಮಾಂಡ್ ಮೇಲೂ ಒತ್ತಡ ಹೇರಿದ್ದು ಇದೀಗ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಆಯ್ಕಗೆ ಹೈಕಮಾಂಡ್ ತಡೆ ನೀಡಿ ವಿಜಯೇಂದ್ರ ಅವರಿಗೆ ಮರ್ಮಘಾತ ಮಾಡಿದೆ.

ಅಲ್ಲದೆ ಈ ಬಗ್ಗೆ ಬಿ.ವೈ ವಿಜಯೇಂದ್ರಗೆ ಪತ್ರ ಬರೆದಿರುವ ಬಿಜೆಪಿ ಹೈಕಮಾಂಡ್ ಬಿ.ಸಂದೀಪ್ ಆಯ್ಕೆಗೆ ತಡೆ ನೀಡುವಂತೆ ಸೂಚಿಸಿದೆ. ಇದರೊಂದಿಗೆ ವಿಜಯೇಂದ್ರ ವಿರುದ್ಧ ತೊಡೆತಟ್ಟಿದ ಸುಧಾಕರ್​ ತಮ್ಮ ತಾಕತ್ತು ತೋರಿಸಿದ್ದಾರೆ.

Comments are closed.