Gruhalakshmi: ಗೃಹಲಕ್ಷ್ಮಿ ಹಣ 2,000ದಿಂದ 3,000ಕ್ಕೆ ಏರಿಕೆ?!

Gruhalakshmi : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗು ತಿಂಗಳಿಗೆ 2000 ರೂ ಹಣ ಸಿಗುತ್ತದೆ. ಆದರೆ ಈಗ ಈ ಹಣವನ್ನು 2000 ದಿಂದ 3000 ಕ್ಕೆ ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂಬ ಸುದ್ದಿ ಬಂದಿದೆ.

ಹೌದು, ಬಿಜೆಪಿ & ಜೆಡಿಎಸ್‌ ನಾಯಕರು ಕಾಂಗ್ರೆಸ್‌ ನಾಯಕರ ವಿರುದ್ಧ ಗ್ಯಾರಂಟಿಯೋಜನೆಗಳನ್ನೇ ಮುಂದೆ ಇಟ್ಟುಕೊಂಡು ವಾಗ್ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಈ ಹೊತ್ತಲ್ಲೇ ಗೃಹಲಕ್ಷ್ಮೀ ಹಣ 3,000 ರೂಪಾಯಿಗೆ ಏರಿಕೆ ಮಾಡಲಾಗುತ್ತದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಸರ್ಕಾರ ಈ ಕುರಿತು ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

Comments are closed.