BJP: ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಿದರೆ…? ಯತ್ನಾಳ್ ಹೇಳಿದ್ದೇನು?

BJP: ರಾಜ್ಯ ಬಿಜೆಪಿಯ ಒಳ ಜಗಳ ತಾರಕಕ್ಕೇರುತ್ತಿದೆ. ಬಣಗಳ ನಡುವೆ ಕಾದಾಟವು ಹೆಚ್ಚುತ್ತಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಇನ್ನೊಂದೆಡೆ ರಾಜ್ಯ ಅಧ್ಯಕ್ಷರ ಆಯ್ಕೆಗೆ ಚುನಾವಣೆ ಕೂಡ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ನಡುವೆ ರೆಬಲ್ ನಾಯಕರ ದೆಹಲಿ ಪ್ರವಾಸ ಮುಂದುವರಿಯುತ್ತಲೇ ಇದೆ. ಮಾಧ್ಯಮಗಳ ಮುಂದೆ ಬಾಯಿಗೆ ಬಂದಂತೆ ಮಾತನಾಡುತ್ತಲೋ ಇದ್ದಾರೆ.

 

ಅಂತೆಯೇ ಇದೀಗ ಯತ್ನಾಳ್ ಅವರು ದೆಹಲಿ ಪ್ರವಾಸದಲ್ಲಿದ್ದು ಹೈಕಮಾಂಡ್ ಬೇಟಿಗೆ ಪರಿತಪಿಸುತ್ತಿದ್ದಾರೆ. ಈ ನಡುವೆ ವಿಜಯೇಂದ್ರ ಅವರನ್ನು ಕೂಡ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ. ಇದರ ಬೆನ್ನಲ್ಲೇ ಯತ್ನಾಳ್ ಅವರಿಗೆ ಮಾಧ್ಯಮದವರು ಹೈಕಮಾಂಡ್ ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮುಂದುವರಿಸಿದರೆ ಏನು ಮಾಡುತ್ತೀರಿ? ಎಂದು ಪ್ರಶ್ನೆಯನ್ನು ಹಾಕಿದ್ದಾರೆ

ಇದಕ್ಕೆ ಉತ್ತರಿಸಿದ ಯತ್ನಾಳ್ ಅವರು ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ರೆ ಅವಾಗ ಹೇಳ್ತೀವಿ. ನಾನು ಅದರ ಬಗ್ಗೆ ಏನು ರಿಯಾಕ್ಷನ್ ಕೊಡಲ್ಲ. ನಾವೂ ಅಷ್ಟೇ ಕಾನ್ಫಡೆಂಟ್ ಆಗಿದ್ದೀವಿ. ನಾವೇನು ಭಯಭೀತರಾಗಿಲ್ಲ. ನಮ್ಮ ಹೈಕಮಾಂಡ್ ಹೇಳಿದ ಮಾರು ಫೈನಲ್. ರಾತ್ರಿ ಕಂಡ ಬಾವಿಗೆ ಹಗಲು ಬೀಳಬೇಕೆಂದರೂ ಬೀಳ್ತೇವೆ. ನಮ್ಮ ಹೈಕಮಾಂಡ್ ನಾಯಕರು ಹಾಗೆ ಮಾಡಲ್ಲ. ವಿಶ್ವಾಸದ ಆಧಾರದ ಮೇಲೆ ನಾವೂ ಹೊರತು ಅಡ್ಜೆಸ್ಟ್ ಮೆಂಟ್ ಗಿರಾಕಿಗಳಲ್ಲ ಎಂದಿದ್ದಾರೆ.

Comments are closed.