Mangaluru : ಅಶ್ಲೀಲ ಚ್ಯಾಟ್ ಮಾಡಿ ಅರ್ಚಕನಿಂದ 10 ಲಕ್ಷ ವಸೂಲಿ – ಯಕ್ಷಗಾನ ಕಲಾವಿದ ಅರೆಸ್ಟ್!!

Mangaluru : ಅರ್ಚಕರು ಒಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ನಿನ್ನ ಮೆಸೇಜುಗಳನ್ನು ಮಾಡಿ, ಪರಸ್ಪರ ಫೋಟೋ ಶೇರ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದಡಿ ಮಂಗಳೂರಿನ ಯಕ್ಷಗಾನ ಕಲಾವಿದರು ಒಬ್ಬರನ್ನು ಪೊಲೀಸರು ಬಂದಿಸಿದ್ದಾರೆ.
ಹೌದು, ಮಂಗಳೂರು ತಾಲೂಕಿನ ಕೊಳಂಬೆ ನಿವಾಸಿ ಅಶ್ವಥ್ ಆಚಾರ್ಯ (33) ಫೇಸ್ ಬುಕ್‌ನಲ್ಲಿ ಕಾಸರಗೋಡು ಮೂಲದ ಅರ್ಚಕರೊಬ್ಬರೊಂದಿಗೆ ತಾನು ಯಕ್ಷಗಾನ ಕಲಾವಿದ ಎಂದು ಪರಿಚಯಿಸಿಕೊಂಡು ಫ್ರೆಂಡ್ ಆಗಿದ್ದ. ಬಳಿಕ ಇಬ್ಬರೂ ಆನ್‌ಲೈನ್‌ನಲ್ಲಿ ಸಂಪರ್ಕದಲ್ಲಿದ್ದು, ಲೈಂಗಿಕವಾಗಿ ಆಕರ್ಷಿಸಿ ಸೆಕ್ಸ್ ಸಂಬಂಧಿಸಿ ಇಬ್ಬರೂ ಚಾಟ್ ಮಾಡುತ್ತಿದ್ದರು. ಇದೇ ವೇಳೆ ಒಬ್ಬರಿಗೊಬ್ಬರು ಫೋಟೋ, ವಿಡಿಯೋ ಷೇರ್ ಮಾಡಿಕೊಂಡಿದ್ದು, ಇದನ್ನೇ ಮುಂದಿಟ್ಟು ಅರ್ಚಕನನ್ನು ಅಶ್ವಥ್ ಆಚಾರ್ಯ ಬ್ಲಾಕೇಲ್ ಮಾಡಿದ್ದಾನೆ ಎನ್ನಲಾಗಿದೆ.
ಅಲ್ಲದೆ, ತಾನು ಯುವತಿಯಾಗಿ ಲಿಂಗ ಬದಲಾಯಿಸಿಕೊಳ್ಳುತ್ತೇನೆ, ಅದಕ್ಕಾಗಿ ಅಗತ್ಯವಿದೆ ಎಂದೂ ನಂಬಿಸಿದ್ದಾನೆ. ಹಣದ ಬ್ಲಾಕ್ಮೇಲ್ ಒಳಗಾದ ಅರ್ಚಕ ಕಳೆದ ನವೆಂಬರ್ ತಿಂಗಳಿನಿಂದ 10.50 ಲಕ್ಷ ರೂ. ಹಣವನ್ನು ಮೊಬೈಲ್ ಆಯಪ್ ಮತ್ತು ಬ್ಯಾಂಕ್ ಮೂಲಕ ಆರೋಪಿ ಖಾತೆಗೆ ಪಾವತಿಸಿದ್ದರು. ಪೌರೋಹಿತ್ಯ ನಡೆಸುತ್ತಿದ್ದ ಅರ್ಚಕನಲ್ಲಿ ಮತ್ತಷ್ಟು ಹಣ ನೀಡದಿದ್ದರೆ ವಿಡಿಯೋ, ಫೋಟೊ ಜಾಲತಾಣದಲ್ಲಿ ಹಾಕುತ್ತೇನೆಂದು ಬೆದರಿಸಿದ್ದಾನೆ.
ಇದರಿಂದ ಬೇಸತ್ತ ಅರ್ಚಕ ಫೆ.5ರಂದು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಾಸರಗೋಡು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದ ಪೊಲೀಸರು ಆರೋಪಿಯನ್ನು ಮಂಗಳೂರಿನ ಮನೆಯಿಂದಲೇ ನಡುರಾತ್ರಿಯಲ್ಲಿ ಬಂಧಿಸಿ ಕರೆದೊಯ್ದಿದ್ದಾರೆ. ಅರ್ಚಕ 3 ಲಕ್ಷವನ್ನು ಗೂಗಲ್ ಪೇಯಲ್ಲಿ ಪಾವತಿಸಿದ್ದರೆ, 7.5 ಲಕ್ಷವನ್ನು ಹಂತಹಂತವಾಗಿ ಮೂರು ಬಾರಿ ಬ್ಯಾಂಕ್ ಖಾತೆ ಮೂಲಕ ಪಾವತಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಬೇರೆಯವರನ್ನೂ ಬ್ಲಾಕ್ಮೇಲ್ ಮಾಡಿದ್ದಾನೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Comments are closed.