Belthangady : ಬೆಳ್ತಂಗಡಿ ಮನೆಯಲ್ಲಿ ದೆವ್ವದ ಕಾಟ – ಹುಲಿಕಲ್ ನಟರಾಜ್ ಹೇಳಿದ್ದೇನು?

Belthangady : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಸಮೀಪದ ಕೊಲ್ಪೆದಬೈಲ್ ಎಂಬಲ್ಲಿ ಕೆಲವು ದಿನಗಳಿಂದ ವಿಚಿತ್ರ ಘಟನೆಗಳು ನಡೆಯುತ್ತವೆ. ಇಲ್ಲಿನ ಉಮೇಶ್ ಶೆಟ್ಟಿ ಅವರ ಮನೆಯಲ್ಲಿ ಇಂತಹ ಘಟನಾವಳಿಗಳು ನಡೆಯುತ್ತಿದ್ದು, ಮನೆಯಲ್ಲಿ ಯಾರೋ ಅಗೋಚರವಾಗಿ ಓಡಾಡಿದಂತೆ ಭಾಸವಾಗುವುದು. ಕತ್ತಲು ಆವರಿಸುತ್ತಿದ್ದಂತೆ, ಮನೆ ಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಗಂಧ-ಪ್ರಸಾದ ನಾಪತ್ತೆಯಾಗುವುದು ಇತ್ಯಾದಿ ವಿಚಿತ್ರ ಘಟನೆಗಳು ನಡೆಯುತ್ತಿವೆ ಎಂದು ಉಮೇಶ್ ಶೆಟ್ಟಿ ತಿಳಿಸಿದ್ದಾರೆ.
ಅಲ್ಲದೆ ವಿಚಿತ್ರವಾದ ಮುಖವೊಂದು, ಪ್ರೇತ ಎನ್ನಲಾದ ಚಹರೆ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ದೆವ್ವನೇ ಎಂದು ವಿಚಿತ್ರ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಬೆಡ್ರೂಂನಲ್ಲಿ ಮನೆಯ ಬಾಲಕಿ ಈ ಚಿತ್ರ ಕ್ಲಿಕ್ಕಿಸಿದ್ದಾಳಂತೆ. ಸದ್ಯ ದೆವ್ವ ಇದೇ ಎನ್ನುವ ಆ ಕುಟುಂಬವು ಅದರ ಕಾಟಕ್ಕೆ ನಲುಗಿ ಹೈರಾಣಾಗಿದೆ… ಗ್ರಾಮದ ಜನ ಭಯಗೊಂಡಿದ್ದಾರೆ! ಈಗ ಈ ಕುರಿತು ಮೂಢನಂಬಿಕೆಗಳನ್ನು ಭಯದ ಗೆಳೆಯ ತಜ್ಞ ಹುಲಿಕಲ್ ನಟರಾಜ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹುಲಿಕಲ್ ನಟರಾಜ್ ಹೇಳಿದ್ದೇನು?
ಈ ದೆವ್ವ ಭೂತ ಅದು ಈ 21ನೇ ಶತಮಾನದಲ್ಲಿ ಇದೆ ಎಂದರೆ ನಂಬುವಂಥ ವಿಷಯವಲ್ಲ, ಅಂಥದ್ದೇನೂ ಇರಲ್ಲ, ಬೇರೆ ಯಾವುದೋ ಕಾರಣವಿರಬಹುದು ಅಥವಾ ಬೇರೆ ಯಾರೋ ಮಾಡ್ತಲೂ ಇರಬಹುದು, ಇದರ ಬಗ್ಗೆ ಅಲ್ಲಿಗೆ ನಾ ನು ಬಂದರೆ ನನಗೆ ತಿಳಿಯುತ್ತೆ, ಆ ಮನೆಯಲ್ಲಿ ಎರಡು ದಿನ ನೆಲೆಸಲು ಕೂಡ ನಾನು ಸಿದ್ದ ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.
Comments are closed.