Ullala: ಕಪ್ಪೆ ಚಿಪ್ಪು ಹೆಕ್ಕಲು ನೇತ್ರಾವತಿ ನದಿಗಿಳಿದ ವ್ಯಕ್ತಿ ಸಾವು !!

Share the Article

Ullala: ಕಪ್ಪೆ ಚಿಪ್ಪು ಹಿಕ್ಕಲು ನೇತ್ರಾವತಿ ನದಿಗಿಳಿದ ವ್ಯಕ್ತಿ ಒಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ.

ಹೌದು, ಉಳ್ಳಾಲ ತಾಲೂಕಿನ ಹರೇಕಳ ಬೈತಾರ್ ಸಮೀಪ ಭಾನುವಾರ ಮಧ್ಯಾಹ್ನ ವಿನೋದ್ ಗಟ್ಟಿ (40) ಎಂಬುವವರು ಮನೆಯಿಂದ ಪಂಪ್ ವೆಲ್ ಕಡೆಗೆ ಕೆಲಸಕ್ಕೆಂದು ತೆರಳಿದ್ದು ಮಧ್ಯಾಹ್ನ ವೇಳೆ ಕೆಲಸದಿಂದ ವಾಪಸ್ ಬಂದಿದ್ದಾರೆ. ಬಳಿಕ ಮನೆಯ ಬಳಿಯ ನದಿಗೆ ಕಪ್ಪೆ ಚಿಪ್ಪು ಹೆಕ್ಕಲು ಇಳಿದಿದ್ದಾರೆ.

ಈ ಸಂದರ್ಭ ವಿನೋದ್ ಅವರ ಕಾಲು ನದಿಯ ಕೆಸರಿನಲ್ಲಿ ಹೂತು ಹೋಗಿದ್ದು ನೀರಿನಿಂದ ಮೇಲೆಳಲು ಸಾಧ್ಯವಾಗದೆ ಸ್ಥಳದಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೃತರು ವಿವಾಹಿತರಾಗಿದ್ದು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.