Bellandur: ಗುಂಡಿನಾರು ಮನೆಯಿಂದ ಚಿನ್ನಾಭರಣ ಕಳ್ಳತನ ಬೈತಡ್ಕ ಮಸೀದಿಯ ಸ್ವಲಾತ್ ಕಾರ್ಯಕ್ರಮಕ್ಕೆ ಹೋಗಿದ್ದ ಸಂದರ್ಭದಲ್ಲಿ ಕಳ್ಳತನ

Share the Article

Kaniyooru : ಬೆಳಂದೂರು ಗ್ರಾಮದ ಗುಂಡಿನಾರು ಎಂಬಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳ್ಳತನ ನಡೆದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡಿನಾರು ನಿವಾಸಿ ಮೊಹಮ್ಮದ್ ಆರಿಫ್ ಅವರು ಈ ಕುರಿತು ಬೆಳ್ಳಾರೆ ಠಾಣೆಗೆ ನೀಡಿದ ದೂರು ನೀಡಿದ್ದು, ಫೆ.6ರಂದು ಸಂಜೆ ಸುಮಾರು 6.30 ಗಂಟೆಗೆ ತನ್ನ ತಂಗಿ ಆರೀಫಾಳ ಮನೆಗೆ ಬೀಗ ಹಾಕಿ, ತಂಗಿ ಆರೀಫಾ, ತಂದೆ ಸುಲೈಮಾನ್, ತಾಯಿ ರೆಹಮತ್, ತಮ್ಮ ಆಸೀಫ್ ನೊಂದಿಗೆ ಬೈತ್ತಡ್ಕ ಮಸೀದಿಯ ವಾರ್ಷಿಕ ಸ್ವಲಾತ್ ಕಾರ್ಯಕ್ರಮಕ್ಕೆ ತೆರಳಿ, ಬಳಿಕ ರಾತ್ರಿ ಸುಮಾರು 10.30 ಗಂಟೆಗೆ ಸ್ವಲಾತ್ ಕಾರ್ಯಕ್ರಮದಿಂದ ಆರೀಫ್ ಅವರ ತಂದೆ,ತಾಯಿ, ತಂಗಿ ಹೊರಟು ಬಂದು ಆರೀಫ್ ಅವರ ತಮ್ಮ ಆಸೀಫ್ ಎಂಬವರ ಮನೆಯಲ್ಲಿ ಮಲಗಿರುತ್ತಾರೆ.

ಬಳಿಕ ರಾತ್ರಿ ಸುಮಾರು 1.00 ಗಂಟೆಗೆ ಆರೀಫ್ ಅವರು ಸ್ವಲಾತ್ ಕಾರ್ಯಕ್ರಮದಿಂದ ಹೊರಟು ಬಂದು ಅವರ ಮನೆಯಲ್ಲಿ ಮಲಗಿರುತ್ತಾರೆ.

ಫೆ.7ರಂದು ಮಧ್ಯಾಹ್ನ ತನ್ನ ತಂಗಿ ಆರೀಫಾಳ ಜೊತೆಯಲ್ಲಿ ಆರೀಫಾಳ ಮನೆಗೆ ಹೋದಾಗ ಮನೆಯ ಮುಂಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಯಾರೋ ತೆರೆಯಲು ಪ್ರಯತ್ನಿಸಿರುವುದು ಕಂಡು ಬಂದಿರುವುದಲ್ಲದೇ, ಮನೆಯ ಹಿಂಬಾಗಿಲನ್ನು ಯಾವುದೋ ಸಾಧನದಿಂದ ಮೀಟಿ ಬಲವಂತವಾಗಿ ತೆರೆದಿರುವುದು ಕಂಡು ಬಂದಿದ್ದು, ಬಳಿಕ ಮನೆಯೊಳಗೆ ತೆರಳಿ ನೋಡಿದಾಗ ಮನೆಯೊಳಗಿನ 2 ಬೆಡ್ ರೂಮ್ ಗಳಲ್ಲಿದ್ದ ಕಪಾಟನ್ನು ತೆರೆದು, ಅದರೊಳಗಿದ್ದ ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿ, ಕಪಾಟಿನೊಳಗಿದ್ದ ಸುಮಾರು 4 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್ 1 (ಅಂದಾಜು ಮೌಲ್ಯ ರೂ.22,000/- ) ಸುಮಾರು 6 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್ 1 (ಅಂದಾಜು ಮೌಲ್ಯ ರೂ.33,000/- ) ಸುಮಾರು 4 ಗ್ರಾಂ ತೂಕದ ಚಿನ್ನದ ಉಂಗುರ 1 (ಅಂದಾಜು ಮೌಲ್ಯ ರೂ.22,000/- ) ಸುಮಾರು 4 ಗ್ರಾಂ ತೂಕದ ಚಿನ್ನ ಇರುವ ಮುತ್ತಿನ ಸರ 1, (ಅಂದಾಜು ಮೌಲ್ಯ ರೂ.,22,000/- ) ಸುಮಾರು 8 ಗ್ರಾಂ ತೂಕದ ಚಿನ್ನದ ಸರ 1, (ಅಂದಾಜು ಮೌಲ್ಯ ರೂ.44,000/- ) ದಂತೆ ಒಟ್ಟು ರೂ. 1,43,000/- ಮೌಲ್ಯದ ಸೊತ್ತುಗಳನ್ನು ಯಾರೋ ಕಳವು ಮಾಡಿರುವುದು ಬೆಳಕಿಬಂದಿದೆ.

ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ ನಂ. 08/25 ಕಲಂ 331(3) 331(4) 305 ಬಿ. ಎನ್.ಎಸ್. 2023 ಯಂತೆ ಪ್ರಕರಣ ದಾಖಲಾಗಿದೆ.

Comments are closed.