of your HTML document.

ಉಜಿರೆಯ ಎಸ್‌.ಡಿ.ಯಂ ಕಾಲೇಜಿನ ಪ್ರಾಧ್ಯಾಪಕ ಸುವೀ‌ರ್ ಜೈನ್ ಅವರಿಗೆ ಪಿಎಚ್‌.ಡಿ. ಪದವಿ

Beltangady : ಉಜಿರೆಯ ಎಸ್.ಡಿ.ಯಂ.ಮಹಾವಿದ್ಯಾಲಯದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಡಾ| ಹಾಮಾನಾ ಸಂಶೋಧನಾ ಕೇಂದ್ರದ ಅಭ್ಯರ್ಥಿ ಸುವೀರ್ ಜೈನ್‌ ಅವರಿಗೆ ಪಿಎಚ್.ಡಿ ಪದವಿ ದೊರೆತಿದೆ.

ಇವರು ಡಾ.ಎ.ಜಯಕುಮಾರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಮತ್ತು ಅಭಿವೃದ್ಧಿ- ರುಡ್ ಸೆಟ್ ನ್ನು ಅನುಲಕ್ಷಿಸಿ ಎಂಬ ವಿಷಯದ ಕುರಿತು ಮಹಾಪ್ರಬಂಧ ರಚಿಸಿ ವಿಶ್ವವಿದ್ಯಾಲಯಕ್ಕೆ ಮಂಡನೆ ಮಾಡಿದ್ದರು.

ಪ್ರಸ್ತುತ ಇವರು ಎಸ್‌.ಡಿ.ಯಂ ಕಾಲೇಜಿನ ಸಮಾಜಕಾರ್ಯ ವಿಭಾಗದಲ್ಲಿ ಕಳೆದ 15 ವರ್ಷಗಳಿಂದ ಪ್ರಾಧ್ಯಾಪಕರಾಗಿ ಮತ್ತು ಕಾಲೇಜಿನ B.voc ವಿಭಾಗದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Comments are closed.