Women: 36-24-36 ಫರ್ಫೆಕ್ಟ್‌ ಫಿಗರ್‌ ಅಲ್ಲ; ಬದಲಾಗಿದೆ ಅಂಕಿ, ಈ ಮಾಡೆಲ್‌ ಫಿಗರ್‌ ಫರ್ಫೆಕ್ಟ್‌ ಎಂದ ಸಂಶೋಧನೆ

Women: ಮಹಿಳೆಯರ ಪರಿಪೂರ್ಣ ದೇಹದ ಗಾತ್ರವನ್ನು 36-24-36 ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಅಂಕಿಗಳ ಮೇಲೆ ನಿಮ್ಮ ಆಲೋಚನೆಯನ್ನು ಬದಲಾಯಿಸುವ ಸಮಯ ಬಂದಿದೆ ಎನ್ನಲಾಗಿದೆ. ಟೆಕ್ಸಾಸ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ, ಬ್ರಿಟಿಷ್ ಮಾಡೆಲ್ ಕೆಲ್ಲಿ ಬ್ರೂಕ್ ವಿಶ್ವದ ಅತ್ಯಂತ ಕರೆಕ್ಟ್‌ ದೇಹದ ಗಾತ್ರವನ್ನು ಹೊಂದಿರುವ ವ್ಯಕ್ತಿ ಎನ್ನಲಾಗಿದೆ. ಅವಳು ದಪ್ಪ ಅಥವಾ ತೆಳ್ಳಗಿಲ್ಲ, ಮತ್ತು ಅವಳ ಫಿಗರ್ ಪರಿಪೂರ್ಣವಾಗಿದೆ. ಆಕೆಯ ದೇಹದ ಗಾತ್ರ ಪರಿಪೂರ್ಣ 36-24-36 ಅಲ್ಲ. ಬನ್ನಿ ಹಾಗಾದರೆ ಯಾವುದು ಫರ್ಫೆಕ್ಟ್‌ ದೇಹದ ಗಾತ್ರ? ತಿಳಿಯೋಣ

ಕೆಲ್ಲಿ (ಕೆಲ್ಲಿ ಬ್ರೂಕ್) 16 ನೇ ವಯಸ್ಸಿನಲ್ಲಿ ಮಾಡೆಲಿಂಗ್ ಪ್ರಾರಂಭಿಸಿದ್ದು, ಈಕೆ ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ ಮತ್ತು ಸೌಂದರ್ಯ ಸ್ಪರ್ಧೆಗಳ ಹೊರತಾಗಿ, ಅವರು ಟಿವಿ ಶೋಗಳು, ಸಂಗೀತ ವೀಡಿಯೊಗಳು ಮತ್ತು ಅನೇಕ ಚಲನಚಿತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾಳೆ. ಈಗ ದೇಹದ ಗಾತ್ರದ ಮೇಲೆ ಮಾಡಿದ ಈ ಸಂಶೋಧನೆಯ ಬಗ್ಗೆ ಹೇಳೋದಾದರೆ, ಅಧ್ಯಯನವು ಕೆಲ್ಲಿ ಬ್ರೂಕ್ ಅತ್ಯುತ್ತಮ ದೇಹದ ಗಾತ್ರ ಹೊಂದಿದ ವ್ಯಕ್ತಿ ಎಂದು ತಿಳಿಸುತ್ತದೆ.

 

ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ಬ್ರಿಟಿಷ್ ಮಾಡೆಲ್ ಕೆಲ್ಲಿ ಬ್ರೂಕ್ ವಿಶ್ವದ ಅತ್ಯುತ್ತಮ ದೇಹದ ಗಾತ್ರವನ್ನು ಹೊಂದಿದ್ದಾರೆ. ಅವಳು ದಪ್ಪವೂ ಅಲ್ಲ, ತೆಳ್ಳಗೂ ಇಲ್ಲ. ಆಕೆ 99-63-91 ಸೆಂ (39-25-36 ಇಂಚುಗಳು). ಸಂಶೋಧನೆಯ ಪ್ರಕಾರ, ಇದನ್ನು ಮಹಿಳೆಯರಲ್ಲಿ ಪರಿಪೂರ್ಣ ಅನುಪಾತವೆಂದು ಪರಿಗಣಿಸಲಾಗುತ್ತದೆ ಮತ್ತು ಕೆಲ್ಲಿ ಈ ಅನುಪಾತಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ.

 

ಎತ್ತರದ ಬಗ್ಗೆ ಹೇಳುವುದಾದರೆ, 1.68 ಮೀಟರ್ ಎತ್ತರವನ್ನು ಪರಿಪೂರ್ಣವೆಂದು ಪರಿಗಣಿಸಲಾಗುತ್ತದೆ. ಈ ಸಂಶೋಧನೆಯಲ್ಲಿ ಮಹಿಳೆಯ ಎತ್ತರ, ಕೂದಲು, ತೂಕ, ಮುಖದ ಆಕಾರ, ಆಕೃತಿ, ಗಾತ್ರ ಮುಂತಾದ ಹಲವು ನಿಯತಾಂಕಗಳನ್ನು ಸೇರಿಸಲಾಗಿದೆ. ಕೆಲ್ಲಿ ಬ್ರೂಕ್ ಅದಕ್ಕೆ ತಕ್ಕಂತೆ ಇದ್ದಾರೆ ಮತ್ತು ವಿಶ್ವದ ಅತ್ಯುತ್ತಮ ವ್ಯಕ್ತಿತ್ವವನ್ನು ಹೊಂದಿರುವ ಮಹಿಳೆ ಎಂದು ಹೇಳಲಾಗಿದೆ.

Comments are closed.