Nepal Viral Video: ಪಿಕ್‌ನಿಕ್‌ಗೆ ಹಣವಿರಲಿಲ್ಲ, ಗೆಳೆಯನ ಸಲುವಾಗಿ ವಿದ್ಯಾರ್ಥಿಗಳು ಸೇರಿ ಮಾಡಿದ ಕೆಲಸ ನಿಮ್ಮನ್ನು ನಿಜಕ್ಕೂ ಬೆರಗಾಗಿಸುತ್ತೆ!

Nepal Viral Video: ಸ್ನೇಹ ಸಂಬಂಧ ಬಹಳ ವಿಶೇಷವಾದದ್ದು. ಇದು ನಂಬಿಕೆಯ ಮೇಲೆ ಆಧಾರಿತವಾದ ಸಂಬಂಧವಾಗಿದೆ. ನಿಜವಾದ ಸ್ನೇಹಿತ ಯಾವಾಗಲೂ ನಿಮಗೆ ಸರಿಯಾದ ಸಲಹೆಯನ್ನು ನೀಡುತ್ತಾನೆ. ನಿಮ್ಮ ಬಗ್ಗೆ ಚಿಂತಿಸುತ್ತಾನೆ ಮತ್ತು ನಿಮ್ಮ ಸಂತೋಷದಲ್ಲಿ ಸಂತೋಷಪಡುತ್ತಾನೆ. ಇತ್ತೀಚೆಗೆ, ನೇಪಾಳದಿಂದ ಅಂತಹ ಹೃದಯಸ್ಪರ್ಶಿ ವೀಡಿಯೊ (ವೈರಲ್ ಕ್ಲಿಪ್) ಒಂದು ವೈರಲ್‌ ಆಗಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಭಾವುಕರನ್ನಾಗಿಸುತ್ತಿದೆ. ಶಾಲಾ ಮಕ್ಕಳ (ಸಹಪಾಠಿಗಳು) ಸ್ನೇಹ ಮತ್ತು ಸಹಕಾರದ ನಿಜವಾದ ಭಾವನೆಯನ್ನು ವೀಡಿಯೊದಲ್ಲಿ ಕಾಣಬಹುದು.

ಈ ವೀಡಿಯೊವನ್ನು ಅವರ ತರಗತಿಯ ಶಿಕ್ಷಕರು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳು ತಮ್ಮ ಸ್ನೇಹಿತ ಪ್ರಿನ್ಸ್‌ಗೆ ಶಾಲಾ ಪ್ರವಾಸಕ್ಕೆಂದು ಹೋಗಲು ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿರುವುದನ್ನು ಕಾಣಬಹುದು. ಇದರಿಂದ ಆತ ಅವರೊಂದಿಗೆ ಶಾಲಾ ಪಿಕ್ನಿಕ್‌ನ ಭಾಗವಾಗಿ ಹೋಗಬಹುದು ಎಂದು ಆ ಮುಗ್ಧ ಮಕ್ಕಳ ಆಸೆ. ಇವರ ಈ ಕೆಲಸ ನೋಡಿ ಟೀಚರ್‌ ಪ್ರಶ್ನೆ ಮಾಡಿದಾಗ, ನಾನೇ ದುಡ್ಡು ಕೊಡುವೆ ಎಂದಾಗ, ಮಕ್ಕಳೆಲ್ಲರೂ ನೋ ಮೇಡಂ ಎಂದಾಗ, ಈ ದುಡ್ಡು ತಗೊಳ್ಳಿ ಎಂದು ನಿಷ್ಕಲ್ಮಶ ಭಾವದಿಂದ ಹೇಳಿದಾಗ, ಒಂದು ಮೂಲೆಯಲ್ಲಿ ನಿಂತು ತನ್ನ ಸ್ನೇಹಿತರ ಮಾತನ್ನು ಕೇಳುತ್ತಿದ್ದ ಪ್ರಿನ್ಸ್‌ಗೆ ಅಳು ಬಂದಿದೆ.

ಈ ವೀಡಿಯೊವನ್ನು ಮಿ ಸಾಂಗ್ಯೆ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಶಿಕ್ಷಕರು ಶೀರ್ಷಿಕೆಯಲ್ಲಿ ಬರೆದಿದ್ದಾರೆ, “ಇಂದು ನಾನು ಸ್ನೇಹದ ಅತ್ಯಂತ ಸುಂದರವಾದ ರೂಪವನ್ನು ನೋಡಿದೆ. ಒಬ್ಬರಿಗೊಬ್ಬರು ಸಹಾಯ ಮಾಡುವುದು ಮಾನವೀಯತೆಯ ದೊಡ್ಡ ಗುಣ ಎಂದು ಈ ಸಣ್ಣ ಮುಗ್ಧ ಮಕ್ಕಳು ನನಗೆ ನೆನಪಿಸಿದರು. ಈ ಪುಟ್ಟ ದೇವತೆಗಳು ತಮ್ಮ ಮುಗ್ಧತೆ ಮತ್ತು ಸಹಾನುಭೂತಿಯಿಂದ ಜಗತ್ತನ್ನು ಬೆಳಗಿಸುವುದನ್ನು ಮುಂದುವರಿಸುತ್ತಾರೆ ಎಂದು ನಾನು ಭಾವಿಸುತ್ತೇನೆʼ ಎಂದು ಬರೆದಿದ್ದಾರೆ.

ವೀಡಿಯೊ ವೈರಲ್ ಆದ ನಂತರ, ಶಿಕ್ಷಕಿ ಮತ್ತೊಂದು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಪ್ರಿನ್ಸ್ ತನ್ನ ಸ್ನೇಹಿತರ ಪ್ರೀತಿಗೆ ಕೃತಜ್ಞತೆಯಿಂದ ಐಸ್ ಕ್ರೀಮ್ ಟ್ರೀಟ್ ಅನ್ನು ನೀಡಿದ್ದಾನೆ ಎಂದು ಹೇಳಿದರು. ಇದಲ್ಲದೇ ಆತನ ತಾಯಿ ಮಕ್ಕಳೆಲ್ಲರಿಗೂ ಕಬ್ಬು ತುಂಬಿದ ಚೀಲವನ್ನು ಕಳುಹಿಸಿದ್ದು ಆ ಕ್ಷಣದ ಸಿಹಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಬರೆದಿದ್ದಾರೆ.

ಪ್ರಿನ್ಸ್ ಅವರ ಕುಟುಂಬದ ಕುರಿತು ಹೇಳಿದ ಶಿಕ್ಷಕರು, ಅವರ ಪೋಷಕರು ಶಾಲೆಯ ಬಳಿ ಜ್ಯೂಸ್ ಸ್ಟಾಲ್ ನಡೆಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇದು ಪ್ರಸ್ತುತ ಚಳಿಗಾಲದ ಕಾರಣ ಮುಚ್ಚಲ್ಪಟ್ಟಿದೆ. ಆದರೆ ಶೀಘ್ರದಲ್ಲೇ ಮತ್ತೆ ತೆರೆಯುತ್ತದೆ ಎಂದು ಹೇಳಿದ್ದಾರೆ.

Comments are closed.