ಮಾ.1-2 : ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ-ಆಮಂತ್ರಣ ಬಿಡುಗಡೆ

Share the Article

Putturu: ಮಾರ್ಚ್ 1 ಮತ್ತು 2 ರಂದು ನಡೆಯುವ ಕೋಟಿ ಚೆನ್ನಯ ಜೋಡುಕರೆ ಕಂಬಳದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಈ ಸಂದರ್ಭ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ., ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್‌. ಚಂದ್ರಹಾಸ ಶೆಟ್ಟಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ..ಕಂಬಳ ಸಮಿತಿಯ ಉಪಾಧ್ಯಕ್ಷರಾದ ಶಿವರಾಮ ಆಳ್ವ ಕುರಿಯ, ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯ ವಿನಯ ಸುವರ್ಣ, ಉಮೇಶ್‌ ಶೆಟ್ಟಿ ಮಾಣಿಸಾಗು, ಪ್ರೋ ಕಬ್ಬಡಿ ಆಟಗಾರ ಪ್ರಶಾಂತ್ ರೈ ಕೈಕಾರ, ವರುಣ್ ಶೆಟ್ಟಿ,ನಿರಂಜನ್ ರೈ ಮಠಂತಬೆಟ್ಟು, ಜಿನ್ನಪ್ಪ ಪೂಜಾರಿ ಮುರ, ಪದಾಧಿಕಾರಿಗಳಾದ ಪ್ರವೀಣ್ ಶೆಟ್ಟಿ ಅಳಕೆಮಜಲು, ವಿಕ್ರಂ ಶೆಟ್ಟಿ ಅಂತರ, ಮಂಜುನಾಥ ಗೌಡ, ನವೀನ್ ಚಂದ್ರ ನ್ಯಾಕ್ ಬೆದ್ರಾಳ, ರಂಜಿತ್ ಬಂಗೇರ, ರೋಷನ್ ರೈ ಬನ್ನೂರು, ಸನ್ಮತ್ ರೈ ಕುಂಬ್ರ, ಅಜಿತ್ ಮಾಣಿಲ, ಹರೀಶ್ ಶೆಟ್ಟಿ, ಗಣೇಶ್ ರಾಜ್. ಚಂದ್ರಹಾಸ ಬನ್ನೂರು, ಉಮಾಶಂಕರ್ ನಾಯ್ಕ, ಸುದೇಶ್ ಕುಮಾ‌ರ್, ಶಶಿಕುಮಾರ್ ನೆಲ್ಲಿ ಕಟ್ಟೆ, ಶರತ್ ಪಡಿಲು ಮೊದಲಾದವರು ಉಪಸ್ಥಿತರಿದ್ದರು.

ಕಂಬಳದ ಮಧ್ಯೆ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆ

ಈ ಬಾರಿ ನಡೆಯುವ ಕಂಬಳದ ಮಧ್ಯೆ ರಾಜ್ಯಮಟ್ಟದ ಕೆಸರುಗದ್ದೆ ಓಟ ಸ್ಪರ್ಧೆಯನ್ನು ನಡೆಯಲಿದೆ. ಕೆಸರುಗದ್ದೆ ಓಟ ಕಂಬಳದ ಒಂದು ಭಾಗವಾಗಿದ್ದು ಮುಂದಿನ ಯುವ ಪೀಳಿಗೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಹಾಗೂ ಇಂತಹ ಕಾರ್ಯಕ್ರಮದಲ್ಲಿ ಯುವಕರು ಆಸಕ್ತಿಯಿಂದ ತೊಡಗಿಸಿಕೊಳ್ಳುವಂತಾಗಲು ಕಂಬಳದ ಮಧ್ಯೆ ಬಿಡುವಿನ ವೇಳೆಯಲ್ಲಿ ಕೆಸರುಗದ್ದೆ ಓಟವನ್ನು ನಡೆಸಲು ಸಂಬಂಧಪಟ್ಟವರೊಂದಿಗೆ ಚರ್ಚಿಸಿ ನಿರ್ಣಯಿಸಲಾಯಿತು.

Comments are closed.