ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಶ್ರೀಪ್ರಸಾದ್ ಪಾಣಾಜೆ ಆಯ್ಕೆ

Putturu: ಪುತ್ತೂರಿನ ಶ್ರೀಪ್ರಸಾದ್ ಪಾಣಾಜೆ ಅವರು ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ನ ಅಂತರಿಕ ಚುನಾವಣೆಯಲ್ಲಿ ಸ್ವರ್ಧಿಸಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

2017 ರಲ್ಲಿ ನಡೆದ ಯುವ ಕಾಂಗ್ರೆಸ್ ನ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಕ್ರಿಯಾಶೀಲ ರಾಗಿದ್ಧ ಇವರು ಅನೇಕ ಪಕ್ಷ ಸಂಘಟನೆ ಕಾರ್ಯಕ್ರಮಗಳನ್ನು ಅಯೋಜಿಸಿದ್ದರು.

ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ಅಯೋಜಿಸಿದ್ದರು.ಕೋರೋನಾ ಮಹಾಮಾರಿ ಸಂದರ್ಭದಲ್ಲಿ ಅನೇಕ ಕುಟುಂಬಗಳಿಗೆ ಆಹಾರ ಕಿಟ್ ಒದಗಿಸಿದ್ದರು.

ಪ್ರಸಾದ್ ಅವರ ಸಂಘಟನೆಯನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಹಮ್ಮದ್ ಹ್ಯಾರಿಸ್ ನಲಪಾಡ್ ರವರು ಕರ್ನಾಟಕ ರಾಜ್ಯದಲ್ಲಿಯೇ ಕ್ರಿಯಾಶೀಲ ಅಧ್ಯಕ್ಷರೆಂದು ಅಭಿನಂದಿಸಿದ್ದರು.

Comments are closed.