Dolly Dhananjay : ಎಲ್ಲರನ್ನೂ ಮದುವೆಗೆ ಕರೆದು ‘ಡಿ ಬಾಸ್’ ನನ್ನೇ ಕೈಬಿಟ್ಟ ಡಾಲಿ ಧನಂಜಯ್ !! ಯಾಕಂತೆ ಗೊತ್ತಾ?

Dolly Dhananjay: ಕನ್ನಡದ ಖ್ಯಾತ ನಟ ಡಾಲಿ ಧನಂಜಯ್ ಅವರು ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆ. ಹೀಗಾಗಿ ಕನ್ನಡದ ಎಲ್ಲ ನಟ-ನಟಿಯರಿಗೆ, ಹಿರಿಯರಿಗೆ ಮನೆ ಮನೆಗೆ ತೆರಳಿ ಮದುವೆಯ ಆಮಂತ್ರಣವನ್ನು ನೀಡುತ್ತಿದ್ದಾರೆ. ಆದರೆ ಅಚ್ಚರಿಯ ಎಂಬಂತೆ ಧನಂಜಯ್ ಅವರು ದರ್ಶನ್ ಅವರಿಗೆ ಆಮಂತ್ರಣವನ್ನೇ ನೀಡಿಲ್ಲ. ಇದು ಕೆಲವು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರೆ ಇನ್ನು ಕೆಲವರಿಗೆ ಬೇಸರ ಉಂಟುಮಾಡಿದೆ. ಸದ್ಯ ಇದೀಗ ಡಾಲಿ ಧನಂಜಯ್ ಅವರೇ ಈ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.

ಹೌದು, ಡಾಲಿ ಧನಂಜಯ್ ಎಲ್ಲರನ್ನೂ ಮದುವೆಗೆ ಕರೆದಿದ್ದಾರೆ. ದರ್ಶನ್‌ (Darshan) ಅವರನ್ನ ಯಾಕೆ ಕರೆದಿಲ್ಲ ಅನ್ನೋದೇ ಈಗ ಪ್ರಶ್ನೆ ಆಗಿದೆ. ಅದಕ್ಕೆ ಕಾರಣ ಏನೂ ಅನ್ನೋದನ್ನ ಸಧ್ಯ ಧನಂಜಯ್ ಅವರು ಹೇಳಿಕೊಂಡಿದ್ದಾರೆ. ನಿಜ, ಮೊನ್ನೆ ಒಂದು ಪ್ರೆಸ್ ಮೀಟ್ ಮಾಡಿದ್ದರು. ಈ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಉತ್ತರವನ್ನು ಕೊಟ್ಟಿದ್ದರು. ” ದರ್ಶನ್ ಅವರನ್ನ ರೀಚ್ ಅಗೋಕೆ ಆಗ್ಲೇ ಇಲ್ಲ. ಅವರಿಗೂ ಮದುವೆ ಆಮಂತ್ರಣ ಕೊಡಬೇಕು ಅಂತ ಇತ್ತು. ಆದರೆ, ಅದು ಸಾಧ್ಯವಾಗ್ಲಿಲ್ಲ. ಹಾಗಾಗಿಯೇ ಈ ವೇದಿಕೆ ಮೂಲಕ ಅವರನ್ನ ಆಹ್ವಾನಿಸುತ್ತೇನೆ” ಎಂದು ಹೇಳಿದ್ದಾರೆ.

ಇನ್ನು ಡಾಲಿ ಧನಂಜಯ್ ಇದೇ ತಿಂಗಳು ಮದುವೆ ಆಗುತ್ತಿದ್ದಾರೆ. ಫೆಬ್ರವರಿ 15 ಮತ್ತು16 ರಂದು ಮೈಸೂರಿನಲ್ಲಿ ಡಾಲಿ ಧನಂಜಯ್-ಧನ್ಯತಾ ಮ್ಯಾರೇಜ್ ಆಗುತ್ತಿದ್ದಾರೆ. ಇಲ್ಲಿಯ ಎಕ್ಸಿಬಿಷನ್ ಗ್ರೌಂಡ್ ಅಲ್ಲಿಯೇ ಅದ್ಭುತವಾಗಿಯೇ ವ್ಯವಸ್ಥೆ ಮಾಡಲಾಗಿದೆ.

Comments are closed.