Belthangady : ಬೆಳ್ತಂಗಡಿ ಮನೆಯಲ್ಲಿ ದೆವ್ವದ ಕಾಟ? ಮೊಬೈಲ್ ನಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ !! ಗ್ರಾಮಸ್ಥರಲ್ಲಿ ಆತಂಕ

Belthangady : ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ಸಮೀಪದ ಕೊಲ್ಪೆದಬೈಲ್‌ ಎಂಬಲ್ಲಿ ಕೆಲವು ದಿನಗಳಿಂದ ವಿಚಿತ್ರ ಘಟನೆಗಳು ನಡೆಯುತ್ತವೆ. ಇಲ್ಲಿನ ಉಮೇಶ್‌ ಶೆಟ್ಟಿ ಅವರ ಮನೆಯಲ್ಲಿ ಇಂತಹ ಘಟನಾವಳಿಗಳು ನಡೆಯುತ್ತಿದ್ದು, ಇದರಿಂದ ಆತಂಕ ಗೊಂಡಿರುವ ಮನೆ ಮಂದಿ ಗುರುವಾರ ಮನೆಯನ್ನೇ ತೊರೆದು ಸಂಬಂಧಿಕರ ಮನೆಗೆ ತೆರಳಿದ್ದಾರೆ.

 

ಹೌದು, ಗ್ರಾಮದ ಉಮೇಶ್ ಶೆಟ್ಟಿ ಎಂಬುವವರ ಮನೆಯಲ್ಲಿ ಯಾರೋ ಅಗೋಚರವಾಗಿ ಓಡಾಡಿದಂತೆ ಭಾಸವಾಗುವುದು. ಕತ್ತಲು ಆವರಿಸುತ್ತಿದ್ದಂತೆ, ಮನೆ ಯೊಳಗೆ ಇರುವ ಬಟ್ಟೆಗೆ ಬೆಂಕಿ ಹಿಡಿದು ಉರಿಯುವುದು, ಮನೆಯ ಪಾತ್ರೆಗಳು ಬೀಳುವುದು, ಮನೆಯಲ್ಲಿದ್ದ ವಸ್ತುಗಳು ಚಲಿಸಿದಂತಾಗುವುದು, ಗಂಧ-ಪ್ರಸಾದ ನಾಪತ್ತೆಯಾಗುವುದು ಇತ್ಯಾದಿ ವಿಚಿತ್ರ ಘಟನೆಗಳು ನಡೆಯುತ್ತಿವೆ ಎಂದು ಉಮೇಶ್‌ ಶೆಟ್ಟಿ ತಿಳಿಸಿದ್ದಾರೆ.

 

ಇನ್ನು ಅಚ್ಚರಿಯ ವಿಚಾರವೆಂದರೆ, ವಿಚಿತ್ರವಾದ ಮುಖವೊಂದು, ಪ್ರೇತ ಎನ್ನಲಾದ ಚಹರೆ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ದೆವ್ವನೇ ಎಂದು ವಿಚಿತ್ರ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಬೆಡ್​​​​ರೂಂನಲ್ಲಿ ಮನೆಯ ಬಾಲಕಿ ಈ ಚಿತ್ರ ಕ್ಲಿಕ್ಕಿಸಿದ್ದಾಳಂತೆ. ಸದ್ಯ ದೆವ್ವ ಇದೇ ಎನ್ನುವ ಆ ಕುಟುಂಬವು ಅದರ ಕಾಟಕ್ಕೆ ನಲುಗಿ ಹೈರಾಣಾಗಿದೆ… ಗ್ರಾಮದ ಜನ ಭಯಗೊಂಡಿದ್ದಾರೆ!

 

ಸ್ಕೂಟಿಯಲ್ಲಿ ಪ್ರಸಾದ ಪ್ರತ್ಯಕ್ಷ!

ಉಮೇಶ್‌ ಅವರು ಸ್ಕೂಟಿ ಹೊಂದಿದ್ದು, ಕೆಲವು ದಿನಗಳಿಂದ ಅದರಲ್ಲಿ ಪ್ರಸಾದ ಕಂಡುಬರುತ್ತಿರುವುದಾಗಿ ತಿಳಿಸಿದ್ದಾರೆ. ಪ್ರತೀದಿನ ಹೊರಗೆ ಹೋಗಿ ಬಂದಾಗ ಅದರಲ್ಲಿ ಪ್ರಸಾದ ಕಂಡುಬರುತ್ತಿದೆ. ಇದಕ್ಕಾಗಿ ಒಮ್ಮೆ ದಿನವಿಡೀ ಕಾದು ಕುಳಿತಿದ್ದೆ. ಅಂದು ಪ್ರಸಾದ ಕಾಣಲಿಲ್ಲ. ಈ ಬಗ್ಗೆ ಜೋತಿಷಿಗಳಲ್ಲಿ ಪ್ರಶ್ನೆ ಚಿಂತನೆ ನಡೆಸಿದಾಗ ಪ್ರೇತ ಮತ್ತು ದೈವದ ಸಮಸ್ಯೆ ಎನ್ನುತ್ತಿದ್ದಾರೆ.

Comments are closed.