Accident: ಕುಂದಾಪುರ: ಹಳಿ ದಾಟುವಾಗ ರೈಲು ಡಿಕ್ಕಿ- ಯುವಕ ಸಾವು

Accident: ಕಿರೆಮಂಗಳದ ನಾಗೂರಿನಲ್ಲಿ ಬಿಜೂರು ಗ್ರಾಮದ ದಿಟಿಮನೆ ನಿವಾಸಿ ಮುತ್ತಯ್ಯ ದೇವಾಡಿಗ ಪುತ್ರ ವಾಸುದೇವ ದೇವಾಡಿಗ (25) ಎಂಬಾತ ರೈಲು ಹಳಿ ದಾಟುವಾಗ ರೈಲು ಡಿಕ್ಕಿ (Accident) ಹೊಡೆದು ಸಾವನ್ನಪ್ಪಿದ್ದಾನೆ.
ಕೇಂದ್ರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವಾಸುದೇವ ಸುಮಾರು ಐದು ಎಕರೆ ಭೂಮಿಯಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದನು ಮತ್ತು ಸುಗ್ಗಿಯ ತಯಾರಿ ನಡೆಸುತ್ತಿದ್ದನು. ಈತ ನಾಗೂರಿನಲ್ಲಿ ತನ್ನ ಕೆಲಸವನ್ನು ಮುಗಿಸಿ ಮನೆಗೆ ಮರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.