Ajekaru: ಅಕ್ರಮ ಮರಳು ಸಾಗಾಟ: ಮರಳು ಸಹಿತ ಟಿಪ್ಪ‌ರ್ ಲಾರಿ ವಶಕ್ಕೆ

Ajekaru: ಕೆರ್ವಾಶೆಯ ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಫೆ. 5 ರಂದು ಮಧ್ಯಾಹ್ನ ಅಜೆಕಾರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಅಜೆಕಾರು (Ajekaru) ಪೊಲೀಸ್‌ ಠಾಣೆ ಪಿಎಸ್‌ಐ ಪ್ರವೀಣ ಕುಮಾ‌ರ್ ಆರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕೆರ್ವಾಶೆ ಕಡೆಯಿಂದ ಅತಿವೇಗವಾಗಿ ಬರುತ್ತಿದ್ದ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ. ಲಾರಿಯನ್ನು ನಿಲ್ಲಿಸಿದ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ವಿಶ್ಲೇಶ್ ಎಂಬವರಿಗೆ ಸೇರಿದ ಮರಳು ಸಾಗಾಟದ ಲಾರಿಯನ್ನು ವಶಪಡಿಸಿಕೊಂಡು 15 ಸಾವಿರ ಮೌಲ್ಯದ 3 ಯೂನಿಟ್ ಮರಳನ್ನು ಸೀಜ್ ಮಾಡಿದ್ದಾರೆ. ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.