Prayagraj: ಸಾವಿರಾರು ಮೃತದೇಹ ನದಿಗೆ ಎಸೆತ, ಭಾರೀ ಕಲುಷಿತ- ಜಯಾ ಬಚ್ಚನ್‌ ಗಂಭೀರ ಆರೋಪ

Share the Article

Prayagraj: ಮಹಾಕುಂಭ ಮೇಳದಲ್ಲಿ ಮೃತದೇಹಗಳನ್ನು ನದಿಗೆ ಎಸೆಯುವ ಮೂಲಕ ಗಂಗಾ-ಯಮುನಾ ನದಿ ನೀರನ್ನು ಕಲುಷಿತಗೊಳಿಸಲಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದೆ ಜಯ ಬಚ್ಚನ್‌ ಆರೋಪಿಸಿದ್ದಾರೆ.

ಜ.29 ರಂದು ಮೌನಿ ಅಮವಾಸ್ಯೆಯ ದಿನ ಸಂಭವಿಸಿದ್ದ ಕಾಲ್ತುಳಿತದಲ್ಲಿ ಸಾವಿರಾರು ಜನ ಸಾವಿಗೀಡಾಗಿದ್ದು, ಸಾವಿನ ಸಂಖ್ಯೆಯನ್ನು ಸರಕಾರ ಮುಚ್ಚಿಟ್ಟಿದೆ. ಹಾಗೂ ಈ ಶವಗಳನ್ನು ನದಿಗೆ ಎಸೆಯಲಾಗಿದೆ ಎಂದು ಜಯಾಬಚ್ಚನ್‌ ಆರೋಪ ಮಾಡಿದ್ದಾರೆ. ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರಕಾರವು ಪರಿಹರಿಸಿಲ್ಲ. ಕೆಲವರಿಗೆ ವಿಶೇಷ ಆತಿಥ್ಯ ನೀಡಲಾಗಿದೆ. ಸಾಮಾನ್ಯ ಭಕ್ತರನ್ನು ಕಡೆಗಣಿಸಲಾಗಿದೆ ಎಂದು ಅವರು ಹೇಳಿದರು.

Comments are closed.