Ullala: ಪಿಎಸ್‌ಐ ಜೀಪಿನಿಂದ ವಾಕಿಟಾಕಿ ಕಳವು

Ullala: ಪೊಲೀಸ್‌ ಜೀಪ್‌ನಲ್ಲಿ ಇಟ್ಟಿದ್ದ ವಾಕಿಟಾಕಿ ಕಳುವಾಗಿರುವ ಘಟನೆಯೊಂದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

 

ಠಾಣೆಯ ಪಿಎಸ್‌ಐ ಧನರಾಜ್‌ ಎಸ್‌ ಎಂಬುವವರು ರಾತ್ರಿ ರೌಂಡ್ಸ್‌ ಕರ್ತವ್ಯಕ್ಕೆ ಹೊರಡುವಾಗ ವಾಕಿಟಾಕಿಗೆ ಚಾರ್ಜ್‌ ಇಲ್ಲದ ಕಾರಣ ಡಿಜಿಟಲ್‌ ವಾಕಿಟಾಕಿಯನ್ನು ಕೊಂಡೋಗಿದ್ದರು. ಜೀಪನ್ನು ಪಿಎಸ್‌ಐ ಚಲಾಯಿಸಿಕೊಂಡು ಹೋಗುತ್ತುರುವಾಗ ಕಲ್ಲಾಪು ಬಳಿ, ಜನರು ಗುಂಪು ಸೇರಿದ್ದನ್ನು ಗಮನಿಸಿದ್ದು, ಪಿಎಸ್‌ಐ ಜೀಪ್‌ ನಿಲ್ಲಿಸಿ, ವಾಕಿಟಾಕಿಯ ಸೀಟ್‌ನಲ್ಲಿಟ್ಟಿದ್ದಾರೆ. ಸೇರಿದ ಜನರನ್ನು ಚದುರಿಸಿ ವಾಪಾಸು ಬಂದು ನೋಡಿದಾಗ ವಾಕಿಟಾಕಿ ಇರಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

Comments are closed.