Sullia: ಸುಳ್ಯ: ಆನ್ ಲೈನ್ ಜಾಬ್ ನೀಡುವುದಾಗಿ ಮೋಸ: ಲಕ್ಷಾಂತರ ರೂ. ವಂಚನೆ ಬಗ್ಗೆ ದೂರು

Sullia: ಸುಳ್ಯದ (Sullia) ಜಾಲ್ಸೂರಿನ 25 ವರ್ಷ ಪ್ರಾಯದ ಮಹಿಳೆಗೆ ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ನೀಡುವುದಾಗಿ ಹಣ ಪಡೆದು ಲಕ್ಷಾಂತರ ರೂ. ವಂಚನೆ ಮಾಡಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಗೃಹಣಿಯಾಗಿದ್ದು, ಜ.19ರಂದು ಕೃಪಾದಿಶಾ ಎಂಬ ಟೆಲಿಗ್ರಾಂ ಖಾತೆಯಿಂದ ಆನ್‌ಲೈನ್ ಪಾರ್ಟ್ಟೈಮ್ ಜಾಬ್ ನೀಡುವುದಾಗಿ ನಂಬಿಸಿ, ಈ ಬಗ್ಗೆ ವಿವಿಧ ವಿಚಾರಗಳನ್ನು ತಿಳಿಸಿ, ಅದರಂತೆ ಮುಂದುವರಿಯಲು ತಿಳಿಸಿದ್ದಾರೆ.

ಅವರು ಹೇಳಿದಂತೆ ಟಾಸ್ಕ್ ಕಂಪ್ಲಿಟ್ ಮಾಡಿದಲ್ಲಿ ಬೋನಸ್ ಸಹಿತ ಹಣ ವಾಪಾಸ್ ನೀಡುವುದಾಗಿ ಹೇಳಿದ್ದಾರೆ.

ಅದರಂತೆ ಮಹಿಳೆ ಜ.21ರಂದು ರೂ.10 ಸಾವಿರ ಹಾಕಿದ್ದು, ಅದರಲ್ಲಿ ರೂ.14,851 ಹಣ ಮಹಿಳೆಯ ಖಾತೆಗೆ ಜಮೆಯಾಗಿದೆ. ನಂತರ ಇದೇ ರೀತಿಯಾಗಿ ಹಂತಹಂತವಾಗಿ ಮಹಿಳೆ ಹಾಗೂ ಇನ್ನೋರ್ವರ ಬ್ಯಾಂಕ್ ಖಾತೆಯಿಂದ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದಾರೆ.

ಆದರೆ ನಂತರದಲ್ಲಿ ಮಹಿಳೆಗೆ ಯಾವುದೇ ಹಣ ವಾಪಾಸ್ ನೀಡದೇ ರೂ. 6,57,486 ರೂ. ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ದಕ್ಷಿಣ ಕನ್ನಡ ಸಿಇಎನ್ (ಸೆನ್) ಅಪರಾಧ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.