Udupi: ವೇಶ್ಯಾವಾಟಿಕೆ ನಡೆಸುತ್ತಿದ್ದ ಹೋಟೆಲ್‌ಗೆ ದಾಳಿ; ಮಹಿಳೆಯ ರಕ್ಷಣೆ

Udupi: ವೇಶ್ಯಾವಾಟಿಕೆ ನಡೆಯುತ್ತಿದ್ದ ಉಡುಪಿಯ ವಸತಿಗೃಹ ಕಟ್ಟಡವೊಂದಕ್ಕೆ ಪೊಲೀಸರು ದಾಳಿ ಮಾಡಿ ಶಿವಮೊಗ್ಗ ಮೂಲದ ಮಹಿಳೆಯೊಬ್ಬರನ್ನು ರಕ್ಷಣೆ ಮಾಡಿರುವ ಘಟನೆಯೊಂದು ಗುರುವಾರ (ಜ.30) ನಡೆದಿದೆ. ಉಡುಪಿಯ ಸನ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿಯ ಮೇರೆಗೆ ಈ ದಾಳಿ ಮಾಡಿದ್ದಾರೆ.
ಶಿವಮೊಗ್ಗ ಮೂಲದ ಮಹಿಳೆಯನ್ನು ಆರೋಪಿ ಕೇಶವ ಎಂಬಾತ ಕೆಲಸಕ್ಕೆಂದು ಕರೆದು, ಹೋಟೆಲ್‌ನಲ್ಲಿ ಆಕೆಯನ್ನು ಇರಿಸಿ, ನಂತರ ಬಲವಂತವಾಗಿ ಅನೈತಿಕ ಚಟುವಟಿಕೆಗೆ ದೂಡಿರುವ ಕುರಿತು ಆರೋಪವಿದೆ. ವಸತಿಗೃಹ ಮಾಲಕರ ವಿರುದ್ಧ ಕೃತ್ಯಕ್ಕೆ ಹೋಟೆಲ್‌ನಲ್ಲಿ ಅನುವು ಮಾಡಿಕೊಟ್ಟದ್ದಕ್ಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.