Hassan : ಮಂಗಳೂರು-ಬೆಂಗಳೂರು ಬಸ್‌ ತಡೆದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ವ್ಯಕ್ತಿ, ಪುಡಿರೌಡಿಗೆ ಗುಂಡೇಟು

Hassan: ಖಾಸಗಿ ಬಸ್‌ ಅಡ್ಡಗಟ್ಟಿ ತಲವಾರಿನಿಂದ ದಾಳಿ ಮಾಡಿದ ವ್ಯಕ್ತಿಯನ್ನು ಬಂಧಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನ ಮಾಡಿದ ರೌಡಿಶೀಟರ್‌ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ಬಂಧಿಸಿದ ಘಟನೆ ಹಾಸನದಲ್ಲಿ ನಡೆದಿದೆ.

ಮನು ಬಂಧಿತ ಆರೋಪಿ. ದೇವರಾಯಪಟ್ಟಣದ ಬಳಿ ಕಾರಿನಲ್ಲಿ ಬಂದ ವ್ಯಕ್ತಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಬಸ್ಸನ್ನು ಅಡ್ಡಗಟ್ಟಿದ್ದ. ಕೂಡಲೇ ಕಾರಿನಿಂದ ಇಳಿದು ಬಂದ ಈತ ಲಾಂಗ್‌ನ್ನು ಕೈಯಲ್ಲಿ ಹಿಡಿದು ಯದ್ವಾತದ್ವ ಬಸ್‌ನ ಗಾಜುಗಳನ್ನು ಒಡೆದು ಹಾಕಿದ್ದ. ಇದನ್ನೆಲ್ಲ ಬಸ್‌ನಲ್ಲಿದ್ದ ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈತನನ್ನು ಬಸ್‌ ಪ್ರಯಾಣಿಕರು ಹಿಡಿಯಲು ಮುಂದಾದಾಗ ಕಾರು ಹತ್ತಿ ಪರಾರಿಯಾಗಿದ್ದ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಬೆನ್ನಲ್ಲೇ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧನ ಮಾಡಿದ್ದಾರೆ.

ಪೊಲೀಸರು ಮಂಗಳೂರು ಕಡೆಯಿಂದ ಬೆಂಗಳೂರಿನೆಡೆಗೆ ವಾಪಸ್‌ ಆಗುತ್ತಿದ್ದಾಗ ಹಾಸನ ತಾಲೂಕಿನ ಶಾಂತಿಗ್ರಾಮದ ಬಳಿ ಟೋಲ್‌ಗೇಟ್‌ ಸಮೀಪ ಆರೋಪಿಯನ್ನು ಸುತ್ತುವರಿದಿದ್ದು, ಈ ವೇಳೆ ಆರೋಪಿ ಕಾರಿನಲ್ಲಿದ್ದ ಲಾಂಗ್‌ ತೆಗೆದು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಪೊಲೀಸರು ತಮ್ಮ ಪ್ರಾಣರಕ್ಷಣೆಗೆ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಈತನ ಮೇಲೆ ಒಂದು ಕೊಲೆ ಪ್ರಕರಣ, ಮೂರು ಕೊಲೆ ಯತ್ನ, ರಾತ್ರಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.

Comments are closed.