LPG ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ !!

LPG: ದೇಶದ ಜನತೆಗೆ ಬಜೆಟ್ ಮಂಡನೆಗೂ ಮುನ್ನವೇ ಭರ್ಜರಿ ಸಿಹಿ ಸುದ್ದಿ ದೊರೆತಿದೆ. ಹೌದು, ಬಜೆಟ್ ಮಂಡನೆಗೂ ಮುನ್ನವೇ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 7 ರೂ ಇಳಿಕೆ ಮಾಡಲಾಗಿದೆ.
ಯಸ್, ವಾಣಿಜ್ಯ ಎಲ್‌ಪಿಜಿ ಬೆಲೆ ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಇಂದು(ಫೆಬ್ರವರಿ 1) ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಗಳನ್ನು ಪರಿಷ್ಕರಿಸಿದ್ದು 19 ಕೆಜಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು ಶನಿವಾರದಿಂದ ಜಾರಿಗೆ ಬರುವಂತೆ 7 ರೂ.ಗಳಷ್ಟು ಕಡಿಮೆ ಮಾಡಲಾಗಿದೆ.
ಇನ್ನು ವಾಣಿಜ್ಯ LPG ಸಿಲಿಂಡರ್‌ಗಳ ಬೆಲೆಯಲ್ಲಿ ಮಾತ್ರ ಈ ಕಡಿತ ಮಾಡಲಾಗಿದ್ದು, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಂದರೆ 14 KG LPG ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Comments are closed.