job:ನಿಮಗೆ ಲವ್‌ ಬ್ರೇಕಪ್‌ ಆಗಿದ್ಯಾ? ಬೆಂಗಳೂರಿನ ಈ ಕಂಪನಿ ನೀಡುತ್ತೆ ಕೈ ತುಂಬಾ ಸಂಬಳದ ಉದ್ಯೋಗ

ನಿಮಗೆನಾದರೂ ಲವ್‌ಬ್ರೇಕಪ್ ಆಗಿದೆಯಾ? ಪ್ರೀತಿಯಲ್ಲಿ ಬಿದ್ದು ನೋವು ಅನುಭವಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಒಳ್ಳೆಯ ಉದ್ಯೋಗ ಇದೆ. ಬೆಂಗಳೂರಿನ ಟಾಪ್‌ಮೇಟ್‌ ಎನ್ನುವ ಕಂಪನಿ ಲವ್‌ ಬ್ರೇಕಪ್‌ ಆದವರಿಂದ ಅರ್ಜಿಯನ್ನು ಆಹ್ವಾನಿಸಿದೆ. ಹೌದು, ಸಾಮಾನ್ಯವಾಗಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ ಶೈಕ್ಷಣಿಕ ಹಿನ್ನೆಲೆ, ಅಂಕ, ಈ ಮೊದಲು ಎಲ್ಲಿ ಕೆಲಸ ಮಾಡಿದ್ದೀನಿ, ಅನುಭವದ ಕುರಿತು ಹೇಳಬೇಕಿತ್ತು. ಆದರೆ ಟಾಪ್‌ಮೇಟ್‌ ಕಂಪನಿ ಲವ್‌ನಲ್ಲಿ ಬ್ರೇಕಪ್‌ ಆಗಿದ್ದವರಿಗೇ ಕೆಲಸ ಕೊಡಲು ಮುಂದಾಗಿದ್ದು ನಿಜಕ್ಕೂ ಅಚ್ಚರಿ ಮೂಡಿಸಿದೆ.

ಟಾಪ್‌ಮೇಟ್‌ ಕಂಪನಿಯಲ್ಲಿ ಮುಖ್ಯಡೇಟಿಂಗ್‌ ಅಧಿಕಾರಿ ಎನ್ನುವ ಹುದ್ದೆ ಖಾಲಿ ಇದ್ದು, ಇದಕ್ಕೆ ಕಂಪನಿಯು ಅರ್ಜಿ ಆಹ್ವಾನ ಮಾಡಿದೆ. ಇದಕ್ಕಾಗಿ ನಿಮ್ಮಲ್ಲಿ ಲವ್‌ನಲ್ಲಿ ಸಾಕಷ್ಟು ಅನುಭವ ಹೊಂದಿರಬೇಕು. ಹಾಗೆನೇ ಲವ್‌ ಫೆಲ್ಯೂರ್‌ ಆದವರು ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಅರ್ಹರು. ಡೇಟಿಂಗ್‌ ಕುರಿತು ಮಾಹಿತಿಯನ್ನು ಕೊಡುವಂತಹ ಒಳ್ಳೆಯ ಮಾತುಗಾರಿಕೆ ನಿಮ್ಮಲ್ಲಿರಬೇಕು. ಪ್ರೀತಿ, ಡೇಟಿಂಗ್‌ ಬಗ್ಗೆ ಪದ ಸೃಷ್ಟಿಸುವ ಕೌಶಲ್ಯವಿದ್ದವರು ಈ ಹುದ್ದೆಗೆ ಅರ್ಹರು.

ಇಷ್ಟು ಮಾತ್ರವಲ್ಲದೇ, 2 ರಿಂದ 3 ವೈವಾಹಿಕ ವೆಬ್‌ಸೈಟ್‌ ಬಳಕೆ ಮಾಡಿದ ಅನುಭವ, ಆನ್‌ಲೈನ್‌ ಡೇಟಿಂಗ್‌ ಕುರಿತ ಮಾಹಿತಿ ನಿಮಗೆ ತಿಳಿದಿರಬೇಕು ಎಂದು ಕಂಪನಿ ಹೇಳಿದೆ. ಈ ಎಲ್ಲಾ ಅರ್ಹತೆಗಳು ನಿಮಗಿದ್ದರೆ ನೀವು ಟಾಪ್‌ಮೇಟ್‌ ಕಂಪನಿಯ ಮುಖ್ಯ ಡೇಟಿಂಗ್‌ ಅಧಿಕಾರಿ ಹುದ್ದೆಗೆ ಅಪ್ಲೈ ಮಾಡಬಹುದು.

ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ :https://app.youform.com/forms/ddee111y?utm_source=LinkedIn&utm_medium=hito&utm_campaign=dating_campaign_youform

Comments are closed.