Kumbamela: ಯಪ್ಪಾ.. ಕುಂಭಮೇಳದಲ್ಲಿ ಭಯಾನಕ ಭವಿಷ್ಯ ನುಡಿದ ಅಘೋರಿ – ಕೇಳಿದ್ರೆ ನಿಂತಲ್ಲೇ ಗಡ ಗಡ ನಡುಗುತ್ತೀರಿ !!

Kumbamela: ಉತ್ತರ ಪ್ರದೇಶದ ಪ್ರಯಾಗ್ರಾಜ್ ನಲ್ಲಿ ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾ ಕುಂಭಮೇಳವು ಅತ್ಯಂತ ವಿಜ್ರಂಬಣೆಯಿಂದ ನೆರವೇರುತ್ತಿದೆ. ನಾಡಿನ ದೇಶದ ವಿದೇಶದ ಮೂಲೆ ಮೂಲೆಗಳಿಂದ ಸಾಧು, ಸಂತರು, ಭಕ್ತರು ಆಗಮಿಸಿ ಗಂಗೆಯಲ್ಲಿ ಮಿಂದು ಪುನೀತರಾಗುತ್ತಿದ್ದಾರೆ. ಅದರಲ್ಲೂ ನಾಗಸಾಧುಗಳು, ಅಘೋರಿಗಳು ಈ ಕುಂಭಮೇಳದ ಪ್ರಮುಖ ಆಕರ್ಷಣೆಯಾಗಿದ್ದಾರೆ. ದಿನನಿತ್ಯವೂ ಇವರ ಕುರಿತು ಅನೇಕ ರೋಚಕ ವಿಚಾರಗಳು ಬಹಿರಂಗವಾಗುತ್ತಿದೆ. ಇದೀಗ ಈ ಬೆನ್ನಲ್ಲೇ ಅಘೋರಿ ಒಬ್ಬರು ಭವಿಷ್ಯದ ಕುರಿತು ರೋಚಕ ಭವಿಷ್ಯವನ್ನು ನೋಡಿದಿದ್ದಾರೆ. ಇದನ್ನು ಕೇಳಿದರೆ ಎಂಥವರು ಕೂಡ ಬೆಚ್ಚಿಬಳುತ್ತಾರೆ

ಹೌದು, ಅಘೋರಿ ಬಾಬಾ ಕಾಲಪುರುಷ, ತನ್ನ ಮುಖದ ಮೇಲೆ ಕೆಂಪು ಬಣ್ಣವನ್ನು ಹೊಂದಿದ್ದಾರೆ, ಅವರ ದೇಹದ ಮೇಲೆ ಬೂದಿಯನ್ನು ಮತ್ತು ಅವರ ಕೈಯಲ್ಲಿ ಮಾನವ ತಲೆಬುರುಡೆಯನ್ನು ಹಿಡಿದುಕೊಂಡಿರುತ್ತಾರೆ. ಅವರು ಹಿಮಾಲಯದ ಶಿಖರಗಳ ಮೇಲೆ ವರ್ಷಗಳ ಕಾಲ ಧ್ಯಾನ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇದೀಗ ಮಹಾಕುಂಭಕ್ಕೆ ಆಗಮಿಸಿದ ಈ ಬಾಬಾ ಭವಿಷ್ಯ ನುಡಿದಿದ್ದು ಸದ್ಯ ಜನರಲ್ಲಿ ಭಯ ಮೂಡಿಸಿದೆ. ಹಾಗಿದ್ರೆ ಈ ಬಾಬಾ ಕಾಲಪುರುಷ ಯಾರು ಮತ್ತು ಅವರು ಏನು ಭವಿಷ್ಯ ಏನು?

ಯಾರು ಈ ಅಘೋರಿ ?
ಈ ಅಘೋರಿ ಹತ್ತಾರು ವರ್ಷಗಳಿಂದ ಕೇವಲ ಕುಂಭಮೇಳಕ್ಕೆ ಮಾತ್ರ ಆಗಮಿಸುತ್ತಾರೆ. ಹಿಮಾಲಯದ ಚಳಿಯಲ್ಲಿ ತಪಸ್ವಿಗಳಾಗಿರುವ ಅವರು, ಕುಂಭಮೇಳಕ್ಕೆ ಆಗಮಿಸಿ ಭಯ ಬೀಳಿಸುವಂತಹ ಭವಿಷ್ಯ ನುಡಿದಿದ್ದಾರೆ. ಹಿಮಾಲಯದ ತುತ್ತತುದಿಯಲ್ಲಿರುವ ಸಿದ್ದಾಶ್ರಮದಲ್ಲಿ ನೆಲೆಸಿರುವ ಅವರು ಕುಂಭಮೇಳದ ಸಮಯದಲ್ಲಿ ಪ್ರತಿ ವರ್ಷ ಭವಿಷ್ಯ ನುಡಿಯುತ್ತಾರೆ. ಆದ್ರೆ ಈ ಬಾರಿಯ ಆಘೋರಿ ನುಡಿದ ಭವಿಷ್ಯ ಬೆಚ್ಚಿ ಬೀಳಿಸಿದೆ. ಕಳೆದ 84 ವರ್ಷಗಳಲ್ಲಿ ಈ ನಾಗಾ ಸಾಧು 7 ಕುಂಭಮೇಳಗಳಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅವರ ಭವಿಷ್ಯವಾಣಿ ಕೇಳಲು ಪ್ರತಿವರ್ಷ ಅಲ್ಲಿ ಭಕ್ತರು ನೆರೆಯುತ್ತಾರೆ.

ಅಘೋರಿ ನುಡಿದ ಭವಿಷ್ಯ ಏನು?
ತ್ರಿವೇಣಿ ಸಂಗಮದಲ್ಲಿ ಅವರು ಸ್ನಾನ ಮಾಡಲು ಬರುವ ಸಮಯದಲ್ಲಿ ಆಕಾಶದಲ್ಲಿ ಕಾಗೆಗಳು ಕರ್ಕಶ ಧ್ವನಿಯಲ್ಲಿ ಕೂಗುತ್ತಿದ್ದವಂತೆ. ಅವರು ಪವಿತ್ರ ಸ್ನಾನ ಮಾಡಿ ನದಿ ತಟದಲ್ಲಿ ಕಣ್ಮುಚ್ಚಿ ಕುಳಿತು ಈ ಭವಿಷ್ಯ ನುಡಿದ್ದಾರೆ.

ಇದೀಗ ಬಾಬಾ ನುಡಿದ ಭವಿಷ್ಯವಾಣಿ ಪ್ರಕಾರ, ಮುಂದಿನ ಕುಂಭಮೇಳದ ಹೊತ್ತಿಗೆ ಸ್ಮಶಾನದಲ್ಲಿ ಹೆಣಗಳ ರಾಶಿಯೇ ಬೀಳಲಿದೆಯಂತೆ. ಇದರಿಂದ ಸ್ಮಶಾನದ ಚಿತಾಗಾರಗಳಲ್ಲಿ ಶವದ ರಾಶಿಗಳು ಹೆಚ್ಚಾಗುತ್ತವಂತೆ. ಅಲ್ಲದೆ ಮುಂದಿನ ದಿನಗಳಲ್ಲಿ ಗಾಳಿ ಕೂಡಾ ಕಪ್ಪಾಗಿ, ವಿಷಕಾರಿಯಾಗಲಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ನಗರಗಳು ಎರವಲು ಪಡೆದ ಭೂಮಿಯನ್ನು ಸಮುದ್ರ ದೇವತೆಗೆ ವಾಪಾಸು ನೀಡುವ ಕಾಲ ಬರಲಿದೆಯಂತೆ. ಅಂದರೆ ನಗರಗಳು ಸಮುದ್ರದಲ್ಲಿ ಮುಳುಗಲಿವೆ ಎಂಬುದು ಇದರ ಒಳಾರ್ಥವಾಗಿದೆ. ಪರ್ವತಗಳ ಮೇಲಿನ ಹಿಮವು ಕಣ್ಮರೆಯಾಗುತ್ತದೆ. ಹಲವಾರು ಪ್ರಾಚೀನ ದೇವಾಲಯಗಳು ಮತ್ತೆ ಭೂಮಿ ಮೇಲೆದ್ದು ಬರುತ್ತವೆ. ನದಿಗಳು ಹೊಸ ಮಾರ್ಗ ಕಂಡುಕೊಳ್ಳಲಿದೆ. ಇಂದು ಯುದ್ಧಭೂಮಿ ಇರುವಲ್ಲಿ ಮುಂದೆ ಕುಂಭಮೇಳ ನಡೆಯಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.

ಇನ್ನು ಬಾಬಾರವರು ತಮ್ಮ ಯಾವುದೇ ಭವಿಷ್ಯವಾಣಿಯಲ್ಲಿ ಮುಂದೆ ನಡೆಯುವ ವಿನಾಶದ ನೇರವಾಗಿ ಉಲ್ಲೇಖಿಸಿಲ್ಲ, ಆದರೆ ಅವರ ಭವಿಷ್ಯವಾಣಿಗಳು ಖಂಡಿತವಾಗಿಯೂ ಮುಂಬರುವ ದುರಂತಗಳಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ. ಅದರಲ್ಲೂ, ಅಘೋರಿ ಬಾಬಾ ಕಾಲಪುರುಷನ ಭವಿಷ್ಯವಾಣಿಗಳು ಎಷ್ಟು ನಿಜವೆಂದು ನಮಗೆ ಮುಂಬರುವ ದಿನಗಳಲ್ಲಿ ತಿಳಿಯಲಿದೆ.

Comments are closed.