BJP ಖಾತೆಯಲ್ಲಿದೆ ಸಾವಿರ, ಸಾವಿರ ಕೋಟಿ ರೂಪಾಯಿ – ಎಷ್ಟು ಎಂದು ಗೊತ್ತಾದ್ರೆ ನೀವೇ ಶಾಕ್ ಆಗುತ್ತೀರಿ?

BJP: ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಖಾತೆಯಲ್ಲಿ ಸಾವಿರಾರು ಕೋಟಿಗಟ್ಟಲೆ ಹಣವಿರುವುದು ಬಹಿರಂಗವಾಗಿದೆ. ಈ ಕುರಿತು ಪಕ್ಷವೇ ಮಾಹಿತಿಯನ್ನು ಹಂಚಿಕೊಂಡಿದ್ದು, ಎಷ್ಟು ಹಣವಿದೆಯೆಂದು ಕೇಳಿದರೆ ನೀವೇ ಶಾಕ್ ಆಗುತ್ತೀರಿ.
ಹೌದು, ವಿಶ್ವದ ಅತಿ ದೊಡ್ಡ ಪಕ್ಷ ಬಿಜೆಪಿ ಬಳಿ ಭರ್ಜರಿ 7113 ಕೋಟಿ ರು. ಬ್ಯಾಂಕ್ ಬ್ಯಾಲೆನ್ಸ್ ಬಾಕಿ ಇದೆ. ಇದರ ನಂತರದಲ್ಲಿ ಕಾಂಗ್ರೆಸ್ ಬಳಿ 857 ಕೋಟಿ ರು. ಹಣ ಇದೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿರುವ ವಾರ್ಷಿಕ ಲೆಕ್ಕಪತ್ರ ವರದಿಯಲ್ಲಿ ತಿಳಿಸಿವೆ.
ಬಿಜೆಪಿ ಖರ್ಚು ವೆಚ್ಚ :
ಆಡಳಿತಾರೂಢ ಬಿಜೆಪಿಯು 2023-24ನೇ ಸಾಲಿನಲ್ಲಿ 1754 ಕೋಟಿ ರು. ಖರ್ಚು ಮಾಡಿದ್ದು, 434.84 ಕೋಟಿ ರು. ವಿದ್ಯುನ್ಮಾನ ಮಾಧ್ಯಮ, 115.62 ಕೋಟಿ ರು. ಮುದ್ರಣ ಮಾಧ್ಯಮಕ್ಕೆ ಖರ್ಚು ಮಾಡಿದೆ. ಇನ್ನು ವಿಮಾನ ಮತ್ತು ಹೆಲಿಕಾಪ್ಟರ್ಗಳಿಗೆ 174 ಕೋಟಿ ರು. ಅಭ್ಯರ್ಥಿಗಳಿಗೆ ಚುನಾವಣಾ ವೆಚ್ಚವಾಗಿ 191.06 ಕೋಟಿ ರು. ವೆಚ್ಚ ಮಾಡಿದೆ. ಇದರ ಜೊತೆಗೆ ಸಭೆಗಳನ್ನು ನಡೆಸಲು 84.32 ಕೋಟಿ ರು. ಮೋರ್ಚಾ, ರ್ಯಾಲಿ, ಆಂದೋಲನ, ಕಾಲ್ ಸೆಂಟರ್ಗಳಿಗೆ 75.14 ಕೋಟಿ ರು. ವ್ಯಯಿಸಿದೆ. ಜೊತೆಗೆ ಹಾಲಿ ರದ್ದಾಗಿರುವ ಚುನಾವಣಾ ಬಾಂಡ್ನಿಂದ 1685.69 ಕೋಟಿ ರು. ಕೊಡುಗೆ ಬಂದಿದೆ ಎಂದು ಆಯೋಗಕ್ಕೆ ವರದಿ ಸಲ್ಲಿಸಿದೆ.
ಹೆಚ್ಚು ದೇಣಿಗೆ ಪಡೆದ ಪಕ್ಷ:
2023-24ನೇ ಸಾಲಿನಲ್ಲಿ ದೇಶದ ರಾಜಕೀಯ ಪಕ್ಷಗಳು ಪಡೆದ ದೇಣಿಗೆಯ ಇವರ ಇದೀಗ ಪ್ರಕಟವಾಗಿದೆ. ಈ ಸಾಲಿನಲ್ಲಿ ರಾಜಕೀಯ ಪಕ್ಷಗಳಿಗೆ ಬರೋಬ್ಬರಿ 20 ಸಾವಿರ ಕೋಟಿ ರೂ. ದೇಣಿಗೆ ಮೊತ್ತ ಹರಿದು ಬಂದಿದೆ. ಅಂದಹಾಗೆ 2022-23 ರ ಹಣಕಾಸು ವರ್ಷದಲ್ಲಿ ಬಿಜೆಪಿ 719.85 ಕೋಟಿ ರೂ. ದೇಣಿಗೆ ಸ್ವೀಕರಿಸಿತ್ತು. ಆದರೆ ಈ ವರ್ಷ ಬರೀ ಬಿಜೆಪಿ ಒಂದಕ್ಕೆ 2, 224 ಕೋಟಿ ರೂ. ದೇಣಿಗೆ ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಾಲಿನಲ್ಲಿ ಬಿಜೆಪಿಗೆ ಮೂರು ಪಟ್ಟು ಹೆಚ್ಚು ದೇಣಿಗೆ ಬಂದಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬಿಜೆಪಿಗೆ ಸಿಕ್ಕಿದ ದೇಣಿಗೆ ಪ್ರಮಾಣ 212% ಏರಿಕೆಯಾಗಿದೆ. ಈ ಮೂಲಕ ಹೆಚ್ಚು ದೇಣಿಗೆ ಪಡೆದ ಪಕ್ಷಗಳ ಸಾಲಿನಲ್ಲಿ ಬಿಜೆಪಿ ಅಗ್ರಸ್ಥಾನವನ್ನು ಪಡೆಯುತ್ತದೆ.
ಎರಡನೇ ಸ್ಥಾನ ಪಡೆದ ಬಿ ಆರ್ ಎಸ್:
ತೆಲಂಗಾಣದ ಕೆಸಿ ಚಂದ್ರಶೇಖರ್ ನೇತೃತ್ವದ ಭಾರತ್ ರಾಷ್ಟ್ರೀಯ ಸಮಿತಿ (ಬಿಆರ್ ಎಸ್) ಪಕ್ಷ 580 ಕೋಟಿ ರೂ. ದೇಣಿಗೆ ಸಂಗ್ರಹಿಸುವ ಮೂಲಕ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಹಿಂದಿಕ್ಕಿ ಬಿಜೆಪಿ ನಂತರ ಅತೀ ಹೆಚ್ಚು ದೇಣಿಗೆ ಪಡೆದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಮೂರನೇ ಸ್ಥಾನದಲ್ಲಿ ಕಾಂಗ್ರೆಸ್:
ಕಳೆದ ವರ್ಷ ಕಾಂಗ್ರೆಸ್ 79.92 ಕೋಟಿ ರೂ. ಸ್ವೀಕರಿಸಿತ್ತು. ಆದರೆ ಈ ವರ್ಷ ಕಾಂಗ್ರೆಸ್ 289 ಕೋಟಿ ದೇಣಿಗೆಯೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಯಾವ ಪಕ್ಷಕ್ಕೆ ಎಷ್ಟು ದೇಣಿಗೆ? ( ಕೋಟಿಗಳಲ್ಲಿ )
ಬಿಜೆಪಿ -2,244
ಬಿಆರ್ಎಸ್ -580
ಕಾಂಗ್ರೆಸ್ -289
ವೈಎಸ್ಆರ್ಸಿಪಿ – 184
ಟಿಡಿಪಿ- 100
ಡಿಎಂಕೆ- 60
ಎಎಪಿ- 11
ಟಿಎಂಸಿ -6
Comments are closed.