Viral Video : ಚಿಕಿತ್ಸೆ ನೀಡೋದು ಬಿಟ್ಟು ಮೊಬೈಲ್ ನಲ್ಲಿ ‘ರೀಲ್ಸ್’ ನೋಡುತ್ತಾ ಕುಳಿತ ವೈದ್ಯ – ಹೃದಯಘಾತದಿಂದ ಮಹಿಳೆ ಸಾವು

Viral Video : ಟ್ರೀಟ್ಮೆಂಟ್ ನೀಡದೆ ಮೊಬೈಲ್ ನಲ್ಲಿ ವೈದ್ಯನೊಬ್ಬ ರಿಲ್ಸ್ ನೋಡುತ್ತಾ ಕುಳಿತಿದ್ದ ವೇಳೆ ಎದುರಿಗಿದ್ದ ವ್ಯಕ್ತಿ ಹೃದಯಗತದಿಂದ ಸಾವನ್ನಪ್ಪಿರುವ ಅಘಾತಕಾರಿ ಘಟನೆ ಎಂದು ಬೆಳಕಿಗೆ ಬಂದಿದೆ.

ಹೌದು, 60 ವರ್ಷದ ಪರ್ವೇಶ್ ಕುಮಾರಿ ಎಂಬ ಮಹಿಳೆಯೊಬ್ಬರು ಹೃದಯಾಘಾತದಿಂದ ಮೈನ್ಪುರಿ ಜಿಲ್ಲಾ ಆಸ್ಪತ್ರೆಯ ತುರ್ತು ವಾರ್ಡ್ನಲ್ಲಿ ಅಡ್ಮಿಟ್ ಆದ ಸಂದರ್ಭದಲ್ಲಿ ವೈದ್ಯನೊಬ್ಬ ಎದುರಿಗೆ ಕೂತು ಮೊಬೈಲ್ನಲ್ಲಿ ಮುಳುಗಿ ಹೋಗಿದ್ದ. ಈ ಸಮಯದಲ್ಲಿ ಸುಮಾರು 15 ನಿಮಿಷಗಳ ಕಾಲ ಚಿಕಿತ್ಸೆ ಪಡೆಯದೆ ಮಹಿಳೆ ಮಲಗಿದ್ದರು. ವೈದ್ಯರು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೆ ಮಹಿಳೆ ಮೃತಪಟ್ಟಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ.

ಈ ಘಟನೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ವೈದ್ಯರು ತಮ್ಮ ಮೇಜಿನ ಬಳಿ ಕುಳಿತು, ದಾದಿಯರು ರೋಗಿಗೆ ಚಿಕಿತ್ಸೆ ನೀಡುತ್ತಿರುವಾಗ ಡಾಕ್ಟರ್ ಫೋನ್ ಬಳಸಿದ್ದಾರೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಹಿಳೆ ಮೃತಪಟ್ಟಿದ್ದು, ವೈದ್ಯರ ವಿರುದ್ಧ ಮಹಿಳೆ ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

Comments are closed.