Hanumantu: 50 ಲಕ್ಷ ಹಣದಲ್ಲಿ ಹನುಮಂತು ಮಾಡು ಕೆಲಸ ಇದುವೇ ಅಂತೆ..! ಗೊತ್ತಾದ್ರೆ ನಿಜಕ್ಕೂ ನಿಮಗೆ ಹೆಮ್ಮೆ ಅನಿಸುತ್ತೆ

Hanumantu: ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತ ಗೆಲ್ಲಬಹುದು ಎನ್ನುವುದು ಹಲವು ಅಭಿಮಾನಿಗಳ ಮಹದಾಸೆಯಾಗಿತ್ತು. ಅದೇ ರೀತಿ ಭಾನುವಾರ (ಜನವರಿ 26) ನಡೆದ ಫಿನಾಲೆಯಲ್ಲಿ ಹನುಮಂತ 5 ಕೋಟಿಗೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಬಿಗ್ ಬಾಸ್ ಸೀಸನ್ 11ರ ವಿಜಯಿಯಾಗಿ ಹೊರಹೊಮ್ಮಿದ್ದಾರೆ.

ಬಿಗ್ ಬಾಸ್ ವಿನ್ನರ್ ಆದ ಹಿನ್ನೆಲೆಯಲ್ಲಿ ಹನುಮಂತು ಅವರಿಗೆ 50 ಲಕ್ಷ ರೂಪಾಯಿಯನ್ನು ಬಹುಮಾನವಾಗಿ ನೀಡಲಾಗಿದೆ. ಬಡತನದಲ್ಲಿ ನೊಂದು ಬೆಂದ ಹನುಮಂತು ಅವರು 50 ಲಕ್ಷ ರೂಪಾಯಿಗಳನ್ನು ಏನು ಮಾಡುತ್ತಾರೆ ಎಂಬುದೇ ಹಲವರ ಕುತೂಹಲ. ಹಾಗಿದ್ರೆ ಈ 50 ಲಕ್ಷ ರೂಪಾಯಿಯನ್ನು ಹನುಮಂತು ಯಾವುದಕ್ಕೆ ಬಳಸುತ್ತಾರೆ ಗೊತ್ತಾ?

ಗೆದ್ದ ಹಣವನ್ನು ಏನು ಮಾಡುತ್ತಾರೆ ಹನುಮಂತ?
ಬಿಗ್ ಬಾಸ್ ಸೀಸನ್ 11ರ ಕಪ್ ಗೆದ್ದು 50 ಲಕ್ಷ ರೂಪಾಯಿ ಬಹುಮಾನ ಸ್ವೀಕರಿಸಿರುವ ಹನುಮಂತ ಮೊದಲು ಮದುವೆ ಅಗಲಿದ್ದಾರಂತೆ. ಉಳಿದ ಹಣದಲ್ಲಿ ತನ್ನ ಸಮುದಾಯ ಮತ್ತು ಹುಟ್ಟೂರಿಗೆ ನೆರವಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಬಡತನದಲ್ಲಿ ಬೆಂದು ನೊಂದು ಸಾಕಾಗಿದ್ದರೂ ತನಗೆ ಬಹುಮಾನವಾಗಿ ಬಂದ ಹಣದಲ್ಲಿ ಸಮುದಾಯಕ್ಕೆ ಮತ್ತು ಊರಿಗೆ ನೆರವಾಗುತ್ತೇನೆ ಎಂದಿರುವ ಹನುಮಂತ ಮಾತಿಗೆ ಮೆಚ್ಚುಗೆ ವ್ಯಕ್ತವಾಗಿದೆ.

Comments are closed.