Udupi: 5 ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕನ ಬಂಧನ

Udupi: ರಸ್ತೆ ಬದಿ ಆಟವಾಡುತ್ತಿದ್ದ ಐದು ವರ್ಷದ ಮಗುವಿಗೆ ಚಾಕೊಲೇಟ್‌ ಆಮಿಷ ತೋರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಬಾಗಲಕೋಟೆ ಮೂಲದ ಮುತ್ತಪ್ಪ ಎಂಬುವವನೇ ಬಂಧಿತ ಆರೋಪಿ.

ಉಡುಪಿ ನಗರದ ಪಿಪಿಸಿ ಕಾಲೇಜಿನ ಸಮೀಪ ಜ.23 ರ ಸಂಜೆ ಆಟವಾಡುತ್ತಿದ್ದ ಮಗುವಿಗೆ ಆರೋಪಿ ಮುತ್ತಪ್ಪ ಚಾಕೊಲೇಟ್‌ ಆಸೆ ತೋರಿಸಿ, ಬಲವಂತವಾಗಿ ಸಮೀಪದ ಓಣಿಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ಕುರಿತು ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು.

ಮಗುವನ್ನು ವೈದ್ಯಕೀಯ ಪರೀಕ್ಷೆ, ಆಪ್ತ ಸಮಾಲೋಚನೆ ಮಾಡಿದಾಗ ಮಗು ಆರೋಪಿ ಎಲ್ಲೆಲ್ಲಿ ತನ್ನನ್ನು ಮುಟ್ಟಿದ್ದಾನೆ ಎಂದು ಹೇಳಿದೆ. ಅದೃಷ್ಟವಶಾತ್‌ ಕೃತ್ಯ ನಡೆಯುತ್ತಿದ್ದ ಸ್ಥಳಕ್ಕೆ ಯಾರೋ ಬಂದಿದ್ದು ಅರಿವಾದಾಗ ಆತ ಬಾಲಕಿಯನ್ನು ಬಿಟ್ಟು ಪರಾರಿಯಾಗಿದ್ದ. ಘಟನೆ ನಡೆಯೋ ಮುನ್ನ ಆರೋಪಿ ಘಟನಾ ಸ್ಥಳದ ಸುತ್ತಮುತ್ತ ಭಿಕ್ಷೆ ಬೇಡುತ್ತಿದ್ದ ಇವೆಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ನಂತರ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದು, ಫೋಟೋಗಳನ್ನು ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿತ್ತು.

Comments are closed.