U T Khadar: ಕುಂಭಮೇಳದಲ್ಲಿ ಪಾಲ್ಗೊಂಡು ತೀರ್ಥ ಸ್ನಾನ ಮಾಡಿದ ಯು ಟಿ ಖಾದರ್!!

U T Khadar: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅಪರೂಪಕ್ಕೊಮ್ಮೆ ನಡೆಯುವ ಕುಂಭ ಮೇಳ ಬಹಳ ವೈಭವದಿಂದ ನಡೆಯುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಧು- ಸಂತರು ಮಾತ್ರವಲ್ಲದೆ ಅನೇಕ ಗಣ್ಯಮಾನ್ಯರು ಆಗಮಿಸುತ್ತಿದ್ದಾರೆ. ಅಂತೆಯೇ ಇದೀಗ ಕುಂಭಮೇಳದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು. ಟಿ ಖಾದರ್(UT Khadar)ಅವರು ಭಾಗಿಯಾಗಿದ್ದಾರೆ. ಭಾಗಿಯಾಗುವುದು ಮಾತ್ರವಲ್ಲದೆ ಅವರು ಕುಂಭಮೇಳದಲ್ಲಿ ದೀರ್ಘ ಸ್ನಾನವನ್ನು ಕೂಡ ಮಾಡಿದ್ದಾರೆ

 

ಹೌದು, ಉತ್ತರ ಪ್ರದೇಶ ವಿಧಾನಸಭೆ ಅಧ್ಯಕ್ಷ ಸತೀಶ್ ಮಹಾನ ಅವರ ಆಹ್ವಾನದ ಮೇರೆಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡಿರುವ ಮಹಾಕುಂಭಮೇಳ ಕಾರ್ಯಕ್ರಮದಲ್ಲಿ ಖಾದರ್ ಭಾಗವಹಿಸಿದ್ದಾರೆ. ಸಹಾಯಕ ಆಯುಕ್ತ ದಶರಥ ಕುಮಾರ್ ಅವರನ್ನು ಆತ್ಮೀಯವಾಗಿ ಆತ್ಮೀಯವಾಗಿ ಸ್ವಾಗತಿಸಿದ್ದರು. ಬಳಿಕ ಅವರು ಪ್ರಯಾಗ್‌ರಾಜ್‌ನಲ್ಲಿನ ಪವಿತ್ರ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿ, ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಅನುಭವಿಸಿದ್ದಾರೆ.

 

ತಮ್ಮ ಸ್ನೇಹಿತರ ಜೊತೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಅವರು, ತೀರ್ಥ ಸ್ನಾನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಅವರು ಅಲ್ಲಿ ಭೇಟಿ ಮಾಡಿದ ನಾಗಾ ಸಾಧುಗಳು ಹಾಗೂ ಅಘೋರಿಗಳ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.

Comments are closed.