Gouthami Jadav: ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾದವ್ ಸಂಸಾರದಲ್ಲಿ ಬಿರುಕು?

Gouthami Jadav: ಬಿಗ್ ಬಾಸ್ ಸ್ಪರ್ಧಿ ಗೌತಮಿ ಜಾದವ್ ಅವರು ಕೆಲವು ವಾರಗಳ ಹಿಂದೆ ಮನೆಯಿಂದ ಔಟ್ ಆಗಿದ್ದರು. ಮನೆಯಲ್ಲಿ ಸದಾ ಪಾಸಿಟಿವ್ ಮಂತ್ರವನ್ನು ಜಪಿಸುತ್ತಿದ್ದ ಇವರು ಕೊನೆಯ ಹಂತದಲ್ಲಿ ಎಲಿಮಿನೇಟ್ ಆಗಿ ಹೊರ ನಡೆದಿದ್ದರು. ಈ ಬೆನ್ನಲ್ಲೇ ಗೌತಮಿ ಜಾದವ್ ಅವರ ಬದುಕಿನಲ್ಲಿ ಬಿರುಕು ಮೂಡಿದೆಯಾ ಎಂಬ ಅನುಮಾನ ಹುಟ್ಟಿಸಿದೆ. ಇದೆಲ್ಲದಕ್ಕೂ ಕಾರಣ ಅವರ ಮಾವ ಮಾಡಿರುವ ಪೋಸ್ಟ್.
ಗೌತಮಿ ಬಿಗ್‌ಬಾಸ್ ಮನೆಯಲ್ಲಿದ್ದಾಗ ಅವರ ಪತಿ ಅಭಿಷೇಕ್ ಅವರು ಬಂದು, 6ವರ್ಷದ ಮದುವೆ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಆದರೀಗ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿ ಗೌತಮಿ ಜಾಧವ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಇದಕ್ಕೆ ಕಾರಣ ಅವರ ಮಾವ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವಾಕ್ಯ.
ಹೌದು, ಗೌತಮಿ ಅವರ ಮಾವ, ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಫೇಸ್ ಬುಕ್ ಬರಹ ಇದೀಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ಅವರು ‘ಫೇಸ್‌ಬುಕ್‌ನಲ್ಲಿ ‘ಶ್ರಮ ಅರ್ಥವಾದರೆ ಅಪ್ಪ ಅರ್ಥವಾಗುತ್ತಾನೆ, ಕರುಣೆ ಅರ್ಥವಾದರೆ ತಾಯಿ ಅರ್ಥವಾಗುತ್ತಾಳೆ’ ಎಂದು ಪೋಸ್ಟ್ ಹಾಕಿ ಅದಕ್ಕೆ ಅಪ್ಪ ಅಮ್ಮನನ್ನು ಬಿಟ್ಟು ಕುರುಡು ಮೋಹಕ್ಕೆ ಮರುಳಾಗಿ ಹೆಂಡತಿಯ ಬಾಲ ಹಿಡಿದು ಹೊರಟು ಹೋಗುವ ನಿಯತ್ತಿಲ್ಲದ ಗಂಡು ಮಕ್ಕಳಿಗೆ ಅರ್ಪಣೆ ಎಂದು ಬರೆದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಅಲ್ಲದೆ ಕೆಲವು ದಿನಗಳ ಹಿಂದೆ ಅನ್ಯಾಯದ ಬೇಡಿಕೆಯ ಪ್ರಾರ್ಥನೆಯನ್ನು ಮುಲಾಜಿಲ್ಲದೆ ಧಿಕ್ಕರಿಸುವ, ತಿರಸ್ಕರಿಸುವ ನಮ್ಮಮ್ಮ ವನದುರ್ಗೆಗೆ ನಮೋ ನಮಃ ಎಂದು ಬರೆದ ವಾಕ್ಯದ ಅರ್ಥ ಹಲವು ಅರ್ಥಗಳನ್ನು ಹುಟ್ಟುಹಾಕಿದೆ.
Comments are closed.