Ullala: ಕೋಟೆಕಾರು ಬ್ಯಾಂಕ್ ದರೋಡೆಕೋರರನ್ನು ಬಂಧಿಸುವುದು ಒಂದೇ ಒಂದು ದಿನ ಲೇಟದ್ರೂ ಈ ಅನಾಹುತವಾಗ್ತಿತ್ತು

Ullala:ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಮೂಲಕ ಮಂಗಳೂರು ಪೊಲೀಸರ ಸಕಾಲ ಕಾರ್ಯಾಚರಣೆಯಿಂದ ಹೀಗೆ ಧಾರಾವಿ ತಲುಪಬೇಕಿದ್ದ ಚಿನ್ನಾಭರಣಗಳು ಮಂಗಳೂರಿನ ಹಾದಿಯನ್ನು ಮರಳಿ ಹಿಡಿದಿವೆ. ಆದರೆ ಈ ಬೆನ್ನಲ್ಲೇ ಅಚ್ಚರಿ ವಿಚಾರವೊಂದು ಬಯಲಾಗಿದೆ.
ಕೋಟೆಕಾರಿನ ಸಹಕಾರಿ ಬ್ಯಾಂಕ್ ನಲ್ಲಿ ನಡೆದಿದ್ದ ಬ್ಯಾಂಕ್ ದರೋಡೆಯ ಆರೋಪಿಗಳನ್ನು ಬಂಧಿಸುವಲ್ಲಿ ಒಂದೇ ದಿನ ತಡವಾಗಿದ್ದರೂ ಈ ಒಂದು ಅನಾಹುತ ನಡೆಯುತ್ತಿತ್ತು. ಅದೃಷ್ಟವಶಾತ್ ಆರೋಪಿಗಳು ಕದ್ದಿದ್ದ ಎಲ್ಲಾ ಮಾಲುಗಳೂ ಯಥಾ ಪ್ರಕಾರ ಸಿಕ್ಕಿದೆ. ಎಲ್ಲಾ ಆರೋಪಿಗಳಿಂದಲೂ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಣ್ಣನ್ ನಿಂದ 2 ಕೆ.ಜಿಯಷ್ಟು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು.
ಹೌದು, ನಂಬಲರ್ಹ ಮೂಲಗಳ ಪ್ರಕಾರ, ಮೂವರ ಬಂಧನ ಒಂದು ದಿನ ತಡವಾಗಿದ್ದರೆ ಈ ಚಿನ್ನಾಭರಣಗಳೆಲ್ಲವೂ ಮುಂಬಯಿ ತಲುಪುತ್ತಿದ್ದವು. ಆರೋಪಿಗಳು ಚಿನ್ನಾಭರಣಗಳ ವಿಲೇವಾರಿಗೆ ಬೇಕಾದ ಎಲ್ಲ ಪ್ರಕ್ರಿಯೆ ಮುಗಿಸಿದ್ದರು. ಚಿನ್ನಾಭರಣಗಳ ಕಾರ್ಡ್ ಗಳನ್ನು ಎಲ್ಲವನ್ನೂ ಕತ್ತರಿಸಿ, ಪೆಟ್ಟಿಗೆಗಳಲ್ಲಿ ಜೋಡಿಸಿಟ್ಟಿದ್ದರು. ಆರೋಪಿಗಳ ಲೆಕ್ಕಾಚಾರದ ಪ್ರಕಾರ ಗುರುವಾರ ಈ ಎಲ್ಲ ಚಿನ್ನಾಭರಣಗಳು ಮುಂಬಯಿಗೆ ರವಾನೆಯಾಗಬೇಕಿತ್ತು. ಅಷ್ಟರಲ್ಲಿ ಪೊಲೀಸರ ತಂತ್ರದಿಂದ ವಿಫಲವಾಗಿದೆ. ಆದರೆ ಗೃಹ ಸಚಿವರೂ ಖಚಿತಪಡಿಸಿರುವಂತೆ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಚಿನ್ನವನ್ನೂ ವಶಪಡಿಸಿಕೊಳ್ಳಲಾಗಿದೆ.
Comments are closed.