Crime News: ಪತ್ನಿಯನ್ನು ಕೊಲೆ ಮಾಡಿ, ದೇಹದ ಭಾಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿದ ಪತಿ

Crime News: ಹೈದಾರಾಬಾದ್‌ನ ಹೊರವಲಯದಲ್ಲಿರುವ ರಂಗಾರೆಡ್ಡಿ ಜಿಲ್ಲೆಯ ಮೀರ್‌ಪೇಟ್‌ನಲ್ಲಿ ನಿವೃತ್ತ ಸೈನಿಕರೊಬ್ಬರು ತಮ್ಮ ಪತ್ನಿಯನ್ನು ಹತ್ಯೆ ಮಾಡಿ, ದೇಹದ ಭಾಗಗಳನ್ನು ಕುಕ್ಕರ್‌ನಲ್ಲಿ ಬೇಯಿಸಿರುವ ಘಟನೆಯೊಂದು ನಡೆದಿದೆ.

ಜ.18 ರಂದು ರಾಚಕೊಂಡ ಪೊಲೀಸ್ ಕಮಿಷನರೇಟ್ ಅಡಿಯಲ್ಲಿ ಮೀರಪೇಟ್ ಪೊಲೀಸ್ ಠಾಣೆಗೆ ಬಂದ ಗುರುಮೂರ್ತಿ ಅವರು ತಮ್ಮ ಪತ್ನಿ ಕಾಣೆಯಾಗಿದ್ದಾರೆ ಎಂದು ದೂರನ್ನು ನೀಡಿದ್ದರು. ನಂತರ ಪೊಲೀಸರು ಗುರುಮೂರ್ತಿಯನ್ನು ವಿಚಾರಣೆ ಮಾಡಿದಾಗ, ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ಪತ್ನಿಯನ್ನು ಕೊಲೆ ಮಾಡಿ, ಪೀಸ್ ಪೀಸ್ ಮಾಡಿ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಬೇಯಿಸಿದ ದೇಹದ ಭಾಗಗಳನ್ನು ಜಿಲ್ಲೆಲಗುಡಾದ ಕೆರೆಗೆ ಎಸೆದಿದ್ದಾನೆ. 13 ವರ್ಷಗಳ ಹಿಂದೆ ಗುರುಮೂರ್ತಿ ಅವರು ಮಾಧವಿ ಎಂಬುವವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಗುರುಮೂರ್ತಿ ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ನಿವೃತ್ತಿ ನಂತರ ಕಾಂಚನ್‌ಬಾಗ್‌ನಲ್ಲಿರುವ ಡಿಆರ್‌ಡಿಒದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.
ಆರೋಪಿ ಹೆಂಡತಿಯನ್ನು ಕೊಂದ ನಂತರ ತನ್ನ ಹೆತ್ತವರೊಂದಿಗೆ ಮೀರ್‌ಪೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರ ತನಿಖೆ ಮುಂದುವರಿದಿದೆ
Comments are closed.