Vitla : ರಥವೇರುತ್ತಿದ್ದ ಪಂಚಲಿಂಗೇಶ್ವರ ಉತ್ಸವ ಮೂರ್ತಿಗೆ ಬಂದು ಬಡಿದ ಡ್ರೋನ್ !!

Vitla: ಇಂದಿನ ದಿನಗಳಲ್ಲಿ ಜಾತ್ರೆ, ಹಬ್ಬ, ಯಾವುದೇ ಸಭೆ, ಸಮಾರಂಭಗಳು ನಡೆಯಲಿ ಅಲ್ಲೆಲ್ಲ ದೃಶ್ಯಗಳನ್ನು ಸೆರೆ ಹಿಡಿಯಲು ಡ್ರೋನ್ ಗಳನ್ನು ಹಾರಿಸುವುದು ಒಂದು ರೂಢಿಯಾಗಿ ಬಿಟ್ಟಿದೆ. ಅಂತಯೇ ವಿಟ್ಲ ಜಾತ್ರೆಯ ಸಂದರ್ಭದಲ್ಲಿ ಡ್ರೋನ್ ಹಾರಿಸಲಾಗಿದ್ದು ಅದು ರಥ ಏರುತ್ತಿದ್ದ ಪಂಚಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಗೆ ಮತ್ತು ಅರ್ಚಕರಿಗೆ ಬಂದು ಬಡಿದಿದೆ.
ಹೌದು, ಕೆಲ ದಿನದ ಹಿಂದೆ ವಿಟ್ಲ(Vitla) ಪಂಚಲಿಂಗೇಶ್ವರ ದೇವರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಈ ವೇಳೆ ವಿಡಿಯೋ ಮಾಡಲು ಹಾರಿಸಿದ ಡ್ರೋನ್ ಒಂದು ರಥದ ಹತ್ತಿರ ಬಂದು ಅಲ್ಲಿ ನಿಂತಿದ್ದ ಅರ್ಚಕರ ತಲೆಗೆ ಬಡಿದಿದೆ. ಈ ವೇಳೆ ದೇವರ ಮೂರ್ತಿ ಹೊತ್ತು ರಥದ ಮೇಲೆ ಏರಿದ್ದ ಅರ್ಚಕರು ಡ್ರೋನ್ ಬಡಿದ ವೇಳೆ ಕೊಂಚ ತಬ್ಬಿಬಾದರೂ ಸಾವರಿಸಿಕೊಂಡಿದ್ದಾರೆ.
ಅಂದಹಾಗೆ ಡ್ರೋನ್ ಸ್ವಲ್ಪ ತಪ್ಪಿ ದೇವರ ಮೂರ್ತಿ ಹೊತ್ತಿದ್ದ ಅರ್ಚಕರಿಗೆ ತಾಗಿದ್ದರೆ , ದೇವರ ಮೂರ್ತಿ ಕೆಳಗೆ ಬೀಳುವ ಸಾಧ್ಯತೆ ಇತ್ತು. ಮಹಾರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು, ಡ್ರೋನ್ ಅಪರೇಟರ್ ಹುಚ್ಚಾಟಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Comments are closed.