Monalisa : ಕುಂಭಮೇಳದಲ್ಲಿ ಫೇಮಸ್ ಆದ ಸುಂದರಿ ಮೊನಾಲಿಸಾ ಸ್ಯಾಂಡಲ್ ವುಡ್ ಗೆ ಎಂಟ್ರಿ!! ಶಿವಣ್ಣನೊಂದಿಗೆ ಈ ಚಿತ್ರದಲ್ಲಿ ನಟನೆ?

Monalisa : ಕುಂಭಮೇಳದಲ್ಲಿ ರಾತ್ರೋರಾತ್ರಿ ಫೇಮಸ್ ಆಗಿದ್ದ ಸುಂದರ ಚೆಲುವೆ ಮೊನಾಲಿಸಾ(Monalisa) ಅವರು ಇದೀಗ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಡಲಿದ್ದಾರೆ ಎಂಬ ವಿಚಾರ ಭಾರಿ ಸದ್ದು ಮಾಡುತ್ತಿದೆ. ಅಚ್ಚರಿಯೇನೆಂದರೆ ಇವರು ನಮ್ಮ ಚಂದನವನಕ್ಕೂ ಕೂಡ ಇದೀಗ ಕಾಲಿಡಿಸಲಿದ್ದಾರೆ ಎಂಬ ಸುದ್ದಿ ಒಂದು ಬಂದಿದೆ.

ಹೌದು, ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್‌ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಕುಂಭಮೇಳ ಎಂದರೆ ಮೊನಾಲಿಸಾ ಎನ್ನುವಷ್ಟರ ಮಟ್ಟಿಗೆ ಈಕೆ ಸದ್ದು ಮಾಡುತ್ತಿದ್ದಾಳೆ. ಇದೀಗ ಮೊನಾಲಿಸಾದ ಸಿನಿಮಾಗಳ ಆಫರ್‌ ಕೂಡ ಬರುತ್ತಿವೆ. ಇದಾಗಲೇ ಸ್ಟೋರಿ ಆಫ್‌ ಮಣಿಪುರ್‌ನಲ್ಲಿ ಈಕೆಯನ್ನು ಸೇರಿಸಿಕೊಳ್ಳುವುದಾಗಿ ನಿರ್ದೇಶಕರು ಹೇಳಿಯಾಗಿದೆ. ಇದರ ನಡುವೆ ಸ್ಯಾಂಡಲ್‌ವುಡ್‌ಗೂ ಮೊನಾಲಿಸಾ ಎಂಟ್ರಿ ಕೊಡಲಿದ್ದಾರೆ ಎನ್ನಲಾಗಿದೆ..

ಹೌದು… ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಿಂದ ಸೋಶಿಯಲ್​​ ಮೀಡಿಯಾದಲ್ಲಿ ಟ್ರೆಂಡ್‌ ಆಗಿರುವ ಮೊನಾಲಿಸಾಗೆ ಕನ್ನಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗಿದೆ. ಡಾ. ಶಿವರಾಜ್​ಕುಮಾರ್​ ಅವರ ಮುಂಬರುವ ಸಿನಿಮಾದಲ್ಲಿ ಈ ನೈಜ ಸುಂದರಿ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗಿದೆ.

ಇನ್ನು ಮಧ್ಯಪ್ರದೇಶದ ಇಂದೋರ್‌ ಈ ಮೋನಾಲಿಸಾ ರಾಮ್ ಚರಣ್, ಶಿವರಾಜ್​​​ಕುಮಾರ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಮಾಹಿತಿ ಇದೆ.​ ಬುಚ್ಚಿ ಬಾಬು ಸನಾ ನಿರ್ದೇಶನದ ಆರ್‌ಸಿ 16 ಚಿತ್ರದಲ್ಲಿ ರಾಮ್ ಚರಣ್ ನಾಯಕ ಮತ್ತು ಜಾನ್ವಿ ಕಪೂರ್ ಈಗಾಗಲೇ ನಾಯಕಿಯಾಗಿ ಫಿಕ್ಸ್ ಆಗಿದ್ದಾರೆ. ಇದೀಗ ಮೊನಾಲಿಸಾ ಹೆಸರು ಕೇಳಿ ಬರುತ್ತಿದೆ. ಈ ಸಿನಿಮಾದ ಎರಡನೇ ಶೆಡ್ಯೂಲ್ ಜನವರಿ 27 ರಿಂದ ಪ್ರಾರಂಭವಾಗಲಿದ್ದು, ದಸರಾಗೆ ಬಿಡುಗಡೆ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಇದರ ನಡುವೆ ವೈರಲ್‌ ಬೆಡಗಿ ಮೊನಾಲಿಸಾ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಸಖತ್‌ ಸದ್ದು ಮಾಡುತ್ತಿದೆ.

Comments are closed.